ADVERTISEMENT

‘ಪ್ರಜಾವಾಣಿ’ ಕ್ವಿಜ್‌ ಬೆಂಗಳೂರು ವಲಯಮಟ್ಟದ ಸ್ಪರ್ಧೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:02 IST
Last Updated 21 ಜನವರಿ 2017, 5:02 IST
‘ಪ್ರಜಾವಾಣಿ’ ಕ್ವಿಜ್‌ ಬೆಂಗಳೂರು ವಲಯಮಟ್ಟದ ಸ್ಪರ್ಧೆಗೆ ಶನಿವಾರ ಬೆಳಿಗ್ಗೆ ಸ್ಪರ್ಧಿಗಳು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಬಿ. ತಿಮ್ಮೇಗೌಡ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
‘ಪ್ರಜಾವಾಣಿ’ ಕ್ವಿಜ್‌ ಬೆಂಗಳೂರು ವಲಯಮಟ್ಟದ ಸ್ಪರ್ಧೆಗೆ ಶನಿವಾರ ಬೆಳಿಗ್ಗೆ ಸ್ಪರ್ಧಿಗಳು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಬಿ. ತಿಮ್ಮೇಗೌಡ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.   

ಬೆಂಗಳೂರು: ‘ಪ್ರಜಾವಾಣಿ’ ಕ್ವಿಜ್‌ ಬೆಂಗಳೂರು ವಲಯಮಟ್ಟದ ಸ್ಪರ್ಧೆಗೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ಪ್ರಶ್ನೆಗಳಿಗೆ ಉತ್ತರಿಸಿದ ಮಕ್ಕಳು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಬಿ. ತಿಮ್ಮೇಗೌಡ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ‘ಪ್ರಜಾವಾಣಿ’ ಸಂಘಟಿಸಿರುವ ಈ ಸ್ಪರ್ಧೆಯಲ್ಲಿ ಇಂದು ಬೆಂಗಳೂರು ವಲಯ ಸ್ಪರ್ಧೆ ನಡೆಯುತ್ತಿದ್ದು, ಮಧ್ಯಾಹ್ನ 2ಕ್ಕೆ ರಾಜ್ಯಮಟ್ಟದ ಫೈನಲ್ ಸ್ಪರ್ಧೆ ನಡೆಯಲಿದೆ.

ಕ್ವಿಜ್‌ ಸ್ಪರ್ಧೆ ವಲಯವಾರು ಜನವರಿ ೪ರಂದು ಮೈಸೂರಿನಿಂದ ಆರಂಭವಾಗಿ ಒಟ್ಟು ಒಂಬತ್ತು ವಲಯಗಳಲ್ಲಿ ಸ್ಪರ್ಧೆ ನಡೆಸಲಾಗಿದೆ.

ADVERTISEMENT

ಫೈನಲ್‌ನಲ್ಲಿ ವಿಜೇತ ಮಕ್ಕಳಿಗೆ ಹಿರಿಯ ಹಾಕಿಪಟು ಅರ್ಜುನ್ ಹಾಲಪ್ಪ ಹಾಗೂ ಚಿತ್ರನಟ ಚೇತನ್‌ ಅವರು ಪ್ರಶಸ್ತಿ ವಿತರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.