ADVERTISEMENT

ಬಜೆಟ್‌: ಯಾವ ಕ್ಷೇತ್ರಕ್ಕೆ ಎಷ್ಟು?

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2016, 16:05 IST
Last Updated 18 ಮಾರ್ಚ್ 2016, 16:05 IST
ಬಜೆಟ್‌: ಯಾವ ಕ್ಷೇತ್ರಕ್ಕೆ ಎಷ್ಟು?
ಬಜೆಟ್‌: ಯಾವ ಕ್ಷೇತ್ರಕ್ಕೆ ಎಷ್ಟು?   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2016–17ನೇ ಸಾಲಿನ ಬಜೆಟ್‌ನಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಬಳಿಕ ಸ್ಥಾನದಲ್ಲಿ ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಕ್ಷೇತ್ರಗಳಿವೆ.

ಅವರು ಶುಕ್ರವಾರ ಮಂಡಿಸಿದ ತಮ್ಮ 11ನೇ ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ನೀಡಿದ್ದಾರೆ ಎಂಬುದರ ವಿವರ ಇಲ್ಲಿದೆ.

* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ – ₹17,373 ಕೋಟಿ

* ನಗರಾಭಿವೃದ್ಧಿ – ₹ 14,853 ಕೋಟಿ

* ಜಲಸಂಪನ್ಮೂಲ – ₹ 14,477 ಕೋಟಿ

* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – ₹13,018 ಕೋಟಿ

* ಇಂಧನ –₹ 12,632 ಕೋಟಿ

* ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ –₹ 7,911 ಕೋಟಿ

* ಕಂದಾಯ – ₹5,532 ಕೋಟಿ

*  ಸಮಾಜಕಲ್ಯಾಣ – ₹5, 464 ಕೋಟಿ

* ಆರೋಗ್ಯ ಮತ್ತು ಕುಟುಂಬ ಕಲ್ಯಾಣ –₹ 5,032 ಕೋಟಿ

* ಉನ್ನತ ಶಿಕ್ಷಣ – ₹ 4,651 ಕೋಟಿ

* ಒಳಾಡಳಿತ –  ₹4,462 ಕೋಟಿ

* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ –₹4,497 ಕೋಟಿ

* ಕೃಷಿ – ₹4,344 ಕೋಟಿ

* ವಸತಿ – ₹ 3,890 ಕೋಟಿ

* ಹಿಂದುಳಿದ ವರ್ಗಗಳ ಕಲ್ಯಾಣ –₹ 2,503 ಕೋಟಿ

* ಆಹಾರ ಮತ್ತು ನಾಗರಿಕ ಸರಬರಾಜು – ₹ 2,096 ಕೋಟಿ

* ಪಶುಸಂಗೋಪನೆ – ₹1886 ಕೋಟಿ

* ಯೋಜನೆ ಮತ್ತು ಪ್ರದೇಶಾಭಿವೃದ್ಧಿ –₹1,816 ಕೋಟಿ

*ವಾಣಿಜ್ಯ ಮತ್ತು ಕೈಗಾರಿಕೆ –₹1, 814 ಕೋಟಿ

* ವೈದ್ಯಕೀಯ ಶಿಕ್ಷಣ – ₹1,614 ಕೋಟಿ

* ಅರಣ್ಯ, ಪರಿಸರ ಮತ್ತು ವನ್ಯಜೀವಿ –₹1,609 ಕೋಟಿ

* ಸಹಕಾರ – ₹1,463 ಕೋಟಿ

* ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್‌ –₹ 1,374 ಕೋಟಿ

* ಕಾರ್ಮಿಕ, ಉದ್ಯೋಗ ಮತ್ತು ತರಬೇತಿ –₹ 1,017 ಕೋಟಿ

*ಮೂಲ ಸೌಲಭ್ಯ ಅಭಿವೃದ್ಧಿ –₹780 ಕೋಟಿ

* ತೋಟಗಾರಿಕೆ – ₹735 ಕೋಟಿ

* ಸಾರಿಗೆ – ₹671 ಕೋಟಿ

* ಪ್ರವಾಸೋದ್ಯಮ – ₹507 ಕೋಟಿ

* ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ –₹500 ಕೋಟಿ

* ರೇಷ್ಮೆ – ₹367 ಕೋಟಿ

* ಕನ್ನಡ ಮತ್ತು ಸಂಸ್ಕೃತಿ – ₹341 ಕೋಟಿ

* ಮೀನುಗಾರಿಕೆ  –₹ 302ಕೋಟಿ

* ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ –₹222 ಕೋಟಿ

* ಕ್ರೀಡಾ ಮತ್ತು ಯುವಜನ ಸೇವೆ –₹ 170 ಕೋಟಿ

* ವಾರ್ತಾ ಇಲಾಖೆ – ₹156 ಕೋಟಿ

ADVERTISEMENT

* ಇ– ಆಡಳಿತ –₹115 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.