ADVERTISEMENT

ಬನ್ನೇರುಘಟ್ಟಕ್ಕೆ ಬಂದ ಕಾಡು ಹುಲಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 20:22 IST
Last Updated 4 ಜುಲೈ 2015, 20:22 IST

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಇದೇ ಮೊದಲ ಬಾರಿಗೆ  ಶನಿವಾರ ಕಾಡಿನ ಹುಲಿ ಕಾಣಿಸಿಕೊಂಡಿದೆ. ‍ಪ್ರವಾಸಿಗರು ಮಧ್ಯಾಹ್ನ 3.45ರ ಸುಮಾರಿಗೆ ಸಫಾರಿ ಮುಗಿಸಿಕೊಂಡು ವಾಪಸ್‌ ಬರುತ್ತಿದ್ದ ವೇಳೆ ಉದ್ಯಾನದ ಮೂಲೆಗುಂಡೆ ಕೆರೆ ಬಳಿ ಹುಲಿಯನ್ನು ನೋಡಿದ್ದಾರೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯಾನದಲ್ಲಿ ಈವರೆಗೂ ಹುಲಿ ಸಾರ್ವಜನಿಕವಾಗಿ ಕಾಣಿಸಿರಲಿಲ್ಲ. ಪ್ರವಾಸಿಗರಿಗೆ ಇದೇ ಮೊದಲ ಬಾರಿಗೆ ಹುಲಿ ಕಂಡಿರುವುದು ವಿಶೇಷ. ಇದು ತಮಿಳುನಾಡಿನ ಥೇಣಿ ಅರಣ್ಯ ಇಲ್ಲವೇ ಕಾವೇರಿ ವನ್ಯಜೀವಿಧಾಮದ ಕಡೆಯಿಂದ ಬಂದಿರಬಹುದು ಎಂದು ಉದ್ಯಾನದ ಡಿಸಿಎಫ್‌ ಸುನೀಲ್‌ ಪನ್ವಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.