ADVERTISEMENT

ಬಹುಸಂಖ್ಯಾತರಿಗೂ ಅಲ್ಪಸಂಖ್ಯಾತರ ಸೌಲಭ್ಯ: ಸಂವಿಧಾನ ತಿದ್ದುಪಡಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 9:34 IST
Last Updated 26 ನವೆಂಬರ್ 2017, 9:34 IST
ಬಹುಸಂಖ್ಯಾತರಿಗೂ ಅಲ್ಪಸಂಖ್ಯಾತರ ಸೌಲಭ್ಯ: ಸಂವಿಧಾನ ತಿದ್ದುಪಡಿಗೆ ಆಗ್ರಹ
ಬಹುಸಂಖ್ಯಾತರಿಗೂ ಅಲ್ಪಸಂಖ್ಯಾತರ ಸೌಲಭ್ಯ: ಸಂವಿಧಾನ ತಿದ್ದುಪಡಿಗೆ ಆಗ್ರಹ   

ಉಡುಪಿ: ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯಗಳನ್ನು ಬಹುಸಂಖ್ಯಾತರಿಗೆ ಒದಗಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರವನ್ನು ಧರ್ಮ ಸಂಸತ್‌ ಆಗ್ರಹಿಸಿದೆ.

ಭಾನುವಾರ ಧರ್ಮ ಸಂಸತ್‌ನ ಮೂರನೇ ಗೋಷ್ಠಿಯಲ್ಲಿ ಪರ್ಯಾಯ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಮಂಡಿಸಿದ ನಿರ್ಣಯವನ್ನು ಅಯೋಧ್ಯೆಯ ಮಹಂತ ಕಮಲನಯನದಾಸ ಮಹಾರಾಜರು ಅನುಮೋದಿಸಿದರು.

ಸೌಲಭ್ಯಗಳಿಗಾಗಿ ಬಹುಸಂಖ್ಯಾತ ಸಮುದಾಯಗಳು, ಅಲ್ಪಸಂಖ್ಯಾತ ಸಮುದಾಯದ ಮಾನ್ಯತೆ ಬಯಸುತ್ತಿವೆ. ಇದಕ್ಕಾಗಿ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರವನ್ನು ಆಗ್ರಹಿಸಲಾಯಿತು.

ADVERTISEMENT

ಈ ನಿರ್ಣಯಕ್ಕೆ ಸಾಧು ಸಂತರು ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದರು.

(ಉಡುಪಿ ಹಿಂದೂ ಸಮಾಜೊತ್ಸವದ ಅಂಗವಾಗಿ ಬೈಕ್ ರ‍್ಯಾಲಿ ನಡೆಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.