ADVERTISEMENT

ಮಂಗಳೂರಿನಲ್ಲಿ 2 ಶಂಕಿತ ನಿಫಾ ಪ್ರಕರಣ: ಮಾದರಿ ಮಣಿಪಾಲ ಪ್ರಯೋಗಾಲಯಕ್ಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 12:52 IST
Last Updated 22 ಮೇ 2018, 12:52 IST
ಮಂಗಳೂರಿನಲ್ಲಿ 2 ಶಂಕಿತ ನಿಫಾ ಪ್ರಕರಣ: ಮಾದರಿ ಮಣಿಪಾಲ ಪ್ರಯೋಗಾಲಯಕ್ಕೆ
ಮಂಗಳೂರಿನಲ್ಲಿ 2 ಶಂಕಿತ ನಿಫಾ ಪ್ರಕರಣ: ಮಾದರಿ ಮಣಿಪಾಲ ಪ್ರಯೋಗಾಲಯಕ್ಕೆ   

ಮಂಗಳೂರು: ನಗರದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತಲಾ ಒಬ್ಬ ರೋಗಿಯ ಗಂಟಲು ದ್ರವದ ಮಾದರಿಯನ್ನು ಮಣಿಪಾಲ ಪ್ರಯೋಗಾಲಕ್ಕೆ ಕಳುಹಿಸಲಾಗಿದ್ದು ನಿಫಾ ಶಂಕೆ ವ್ಯಕ್ತವಾಗಿದೆ.

ಇದು ನಿಫಾ ಸೋಂಕು ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರಿಂದ ಇಬ್ಬರು ರೋಗಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ, ಇದುವರೆಗೆ ಪ್ರಯೋಗಾಲಯದ ವರದಿ ಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣರಾವ್‌ ತಿಳಿಸಿದ್ದಾರೆ.

ಒಬ್ಬ ರೋಗಿ ಕೇರಳದಿಂದ ಇಲ್ಲಿಗೆ ಬಂದಿದ್ದು ಹಾಗಾಗಿ ಅವರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನೊಬ್ಬ ರೋಗಿ ಸ್ಥಳೀಯ ವ್ಯಕ್ತಿ. ಆದರೆ, ಇದುವರೆಗೂ ಜಿಲ್ಲೆಯಲ್ಲಿ ನಿಫಾ ಪ್ರಕರಣ ದೃಢಪಟ್ಟಿಲ್ಲ ಎಂದು ಡಾ.ರಾಮಕೃಷ್ಣರಾವ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.