ADVERTISEMENT

ಮುಖ್ತಿಯಾರ್ ಅಲಿಗೆ ನಾಗೇಗೌಡ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಸೂಫಿ ಗಾಯಕ ಮುಖ್ತಿಯಾರ್‌ ಅಲಿ ಅವರಿಗೆ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ (ಬಲತುದಿ) ‘ನಾಡೋಜ ಎಚ್‌.ಎಲ್‌.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪರಿಷತ್ತಿನ ವ್ಯವಸ್ಥಾಪಕ ಟ್ರಸ್ಟಿ ಇಂದಿರಾ ಬಾಲಕೃಷ್ಣ ಹಾಗೂ ಚಿರಂಜೀವಿ ಸಿಂಗ್‌  ಇದ್ದರು–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನಾಡೋಜ ಎಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’ಯನ್ನು ರಾಜಸ್ತಾನದ ಸೂಫಿ ಗಾಯಕ ಮುಖ್ತಿಯಾರ್ ಅಲಿ ಅವರಿಗೆ ನಗರದ ಕಲಾಗ್ರಾಮದಲ್ಲಿ ಗುರುವಾರ ನೀಡಿ ಗೌರವಿಸಲಾಯಿತು.
 
ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಪ್ರಶಸ್ತಿಯನ್ನು ನೀಡಲಾಗಿದ್ದು,  ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಪ್ರದಾನ ಮಾಡಿದರು. ಪ್ರಶಸ್ತಿಯು ರಾಗಿ ಬೀಸುವ ಕಲ್ಲಿನ ಮಾದರಿಯ ಸ್ಮರಣಿಕೆ, ಫಲಕ ಹಾಗೂ ₹ 1 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.
 
ಇದೇ ವೇಳೆ ಪ್ರೊ.ಶಿವರಾಮಯ್ಯ ಅವರ ‘ಪ್ರವಾಸಿ ಕಂಡ ಇಂಡಿಯಾ ಒಂದು ಮರು ಪಯಣ’ ಕೃತಿಯನ್ನು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಬಿಡುಗಡೆಗೊಳಿಸಿದರು. ಈ ಪುಸ್ತಕ ಎಚ್.ಎಲ್.ನಾಗೇಗೌಡ ಅವರು 8 ಸಂಪುಟಗಳಾಗಿ ರಚಿಸಿರುವ ‘ಪ್ರವಾಸಿ ಕಂಡ ಇಂಡಿಯಾ’ ಪುಸ್ತಕಗಳ ಪ್ರಮುಖ ಅಂಶಗಳನ್ನು ಸಂಗ್ರಹಿಸಿ ರಚಿಸಿದ ಪುಸ್ತಕವಾಗಿದೆ.
 
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ  ಮುಖ್ತಿಯಾರ್ ಅಲಿ, ‘ಇಂದು ನನ್ನ ಜೀವನದ ಬಹುಮುಖ್ಯವಾದ ದಿನವಾಗಿದೆ. ನನ್ನ ಕಲೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಇದು ಕರ್ನಾಟಕದ ಘನತೆಯನ್ನು ಹೆಚ್ಚಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.