ADVERTISEMENT

ರಾಜ್ಯದಲ್ಲಿ 49 ಹೊಸ ತಾಲ್ಲೂಕುಗಳ ರಚನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 11:53 IST
Last Updated 15 ಮಾರ್ಚ್ 2017, 11:53 IST
ರಾಜ್ಯದಲ್ಲಿ 49 ಹೊಸ ತಾಲ್ಲೂಕುಗಳ ರಚನೆ
ರಾಜ್ಯದಲ್ಲಿ 49 ಹೊಸ ತಾಲ್ಲೂಕುಗಳ ರಚನೆ   

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 49 ಹೊಸ ತಾಲ್ಲೂಕುಗಳ ರಚನೆಯನ್ನು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿದೆ.

‘ಬೌಗೋಳಿಕ ಹಾಗೂ ಆಡಳಿತಾತ್ಮಕ ಅಗತ್ಯಗಳನ್ನು ಪರಿಗಣಿಸಿ ಹೊಸ ತಾಲ್ಲೂಕುಗಳ ರಚನೆಗೆ ಕ್ರಮಕೈಗೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಏಳು ಹೊಸ ತಾಲ್ಲೂಕುಗಳ ರಚನೆ ಘೋಷಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಹೊಸ ತಾಲ್ಲೂಕು ಆಗಲಿದೆ.

ADVERTISEMENT

ಹೊಸ ತಾಲ್ಲೂಕುಗಳು
* ಬಾಗಲಕೋಟೆ ಜಿಲ್ಲೆ: ಗುಳೇದಗುಡ್ಡ, ರಬಕವಿ–ಬನಹಟ್ಟಿ ಮತ್ತು ಇಳಕಲ್‌
* ಬೆಳಗಾವಿ ಜಿಲ್ಲೆ: ನಿಪ್ಪಾಣಿ, ಮೂಡಲಗಿ ಮತ್ತು ಕಾಗವಾಡ
* ಚಾಮರಾಜನಗರ ಜಿಲ್ಲೆ: ಹನೂರು
* ದಾವಣಗೆರೆ ಜಿಲ್ಲೆ: ನ್ಯಾಮತಿ
* ಬೀದರ್‌ ಜಿಲ್ಲೆ: ಬಿಟಗುಪ್ಪ, ಹುಲಸೂರು ಮತ್ತು ಕಮಲಾನಗರ

* ಬಳ್ಳಾರಿ ಜಿಲ್ಲೆ: ಕುರುಗೋಡು, ಕೊಟ್ಟೂರು ಮತ್ತು ಕಂಪ್ಲಿ
* ಧಾರವಾಡ ಜಿಲ್ಲೆ: ಅಣ್ಣಿಗೇರಿ, ಅಳ್ನಾವರ ಮತ್ತು ಹುಬ್ಬಳ್ಳಿ ನಗರ
* ಗದಗ ಜಿಲ್ಲೆ: ಗಜೇಂದ್ರಗಡ ಮತ್ತು ಲಕ್ಷ್ಮೇಶ್ವರ
* ಕಲಬುರಗಿ ಜಿಲ್ಲೆ: ಕಾಳಗಿ, ಕಮಲಾಪುರ, ಯಡ್ರಾವಿ ಮತ್ತು ಶಹಾಬಾದ್‌
* ಯಾದಗಿರಿ ಜಿಲ್ಲೆ: ಹುಣಸಗಿ, ವಡಗೆರೆ ಮತ್ತು ಗುರುಮಿಟ್ಕಲ್‌

* ಕೊಪ್ಪಳ ಜಿಲ್ಲೆ: ಕುಕನೂರು, ಕನಕಗಿರಿ ಮತ್ತು ಕಾರಟಗಿ
* ರಾಯಚೂರು ಜಿಲ್ಲೆ: ಮಸ್ಕಿ ಮತ್ತು ಸಿರವಾರ
* ಉಡುಪಿ ಜಿಲ್ಲೆ: ಬ್ರಹ್ಮಾವರ, ಕಾಪು ಮತ್ತು ಬೈಂದೂರು
* ದಕ್ಷಿಣ ಕನ್ನಡ ಜಿಲ್ಲೆ: ಮೂಡುಬಿದರೆ ಮತ್ತು ಕಡಬ
* ಬೆಂಗಳೂರು ನಗರ ಜಿಲ್ಲೆ: ಯಲಹಂಕ

* ವಿಜಯಪುರ ಜಿಲ್ಲೆ: ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ ಮತ್ತು ಕೋಲ್ಹಾರ
* ಹಾವೇರಿ ಜಿಲ್ಲೆ: ರಟ್ಟೀಹಳ್ಳಿ
* ಮೈಸೂರು ಜಿಲ್ಲೆ: ಸರಗೂರು
* ಚಿಕ್ಕಮಗಳೂರು ಜಿಲ್ಲೆ: ಅಜ್ಜಂಪುರ
* ಉತ್ತರ ಕನ್ನಡ ಜಿಲ್ಲೆ: ದಾಂಡೇಲಿ
* ಕೋಲಾರ ಜಿಲ್ಲೆ: ಕೆಜಿಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.