ADVERTISEMENT

ವೈದ್ಯಕೀಯ ಸೀಟು ಬಿಕ್ಕಟ್ಟು ಅಂತ್ಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಇದರಿಂದ 500 ಕ್ಕೂ ಹೆಚ್ಚು ಸೀಟುಗಳು ಲಭ್ಯವಾಗಿವೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳ 364  ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳ 115 ಕ್ಕೂ ಹೆಚ್ಚು ಸೀಟುಗಳು ಈ ಒಪ್ಪಂದದಿಂದ ಲಭ್ಯವಾಗಿವೆ.
ಇದೇ 22 ಅಥವಾ 23 ರಂದು ಆರಂಭವಾಗುವ ಸಿಇಟಿ ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಈ ಸೀಟುಗಳನ್ನು ಪರಿಗಣಿಸಲಾಗುವುದು’ ಎಂದು ಸಚಿವರು ತಿಳಿಸಿದರು.
‘ಸಿಇಟಿ ಮೂಲಕ ಕಳೆದ ವರ್ಷ 2,636 ಸೀಟುಗಳು ಹಂಚಿಕೆ ಮಾಡಲಾಗಿತ್ತು. ಈ ವರ್ಷ 3 ಸಾವಿರಕ್ಕೂ ಹೆಚ್ಚು ಸೀಟುಗಳು ಲಭ್ಯ ಇವೆ. ಸರ್ಕಾರಿ ಕಾಲೇಜುಗಳಲ್ಲಿ ಲಭ್ಯ ಇರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಸಂಖ್ಯೆ ಕಳೆದ ವರ್ಷ 1,400 ಇದ್ದದ್ದು, ಈ ಬಾರಿ 2,400ಕ್ಕೆ ಏರಿಕೆ ಆಗಿದೆ. ಹೊಸದಾಗಿ ಆರಂಭಿಸಲಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಂದ 450 ಕ್ಕೂ ಹೆಚ್ಚು ಸೀಟುಗಳು ಲಭ್ಯವಾಗಿರುವುದು ಇದಕ್ಕೆ ಕಾರಣ. ಇದರಿಂದ ರಾಜ್ಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನು ಕೂಲ ಆಗುತ್ತದೆ’ ಎಂದು ಶರಣ ಪ್ರಕಾಶ ಪಾಟೀಲ ವಿವರಿಸಿದರು.

‘ಭಾಷಾ ಅಲ್ಪಸಂಖ್ಯಾತ ಕಾಲೇಜು ಗಳ ಜೊತೆ ಮಾಡಿಕೊಂಡಿರುವ ಒಪ್ಪಂದ ದಿಂದಾಗಿ ಈ ಬಾರಿ ವೈದ್ಯಕೀಯ ಸೀಟು ಗಳ ಲಭ್ಯತೆ ಬಗ್ಗೆ ಗೊಂದಲವಿಲ್ಲ. ಇದ ರಿಂದ ವಿದ್ಯಾರ್ಥಿಗಳು ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂದು ಸುಲಭವಾಗಿ ನಿರ್ಧಾರಕ್ಕೆ ಬರಬಹುದು. ಇದೇ 31 ರೊಳಗೆ ಎಂಜಿನಿಯರಿಂಗ್‌ ಕೌನ್ಸೆಲಿಂಗ್‌ ಪೂರ್ಣಗೊಳಿಸಲಾಗು ವುದು’ ಎಂದು ವಿವರಿಸಿದರು.

ವೈದ್ಯಕೀಯ ಶುಲ್ಕದ ವಿವರ
*ಸಿಇಟಿ ಮೂಲಕ ಹಂಚಿಕೆ ಮಾಡುವ ಸೀಟುಗಳಿಗೆ: ₹ 75,000
*ಕಾಮೆಡ್‌ ಕೆ ಮತ್ತು ಎನ್‌ಇಇಟಿ ಮೂಲಕ ಹಂಚಿಕೆ ಮಾಡುವ ಸೀಟುಗಳಿಗೆ: ₹ 5.75 ಲಕ್ಷ

ದಂತ ವೈದ್ಯಕೀಯ
* ಸಿಇಟಿ ಮೂಲಕ ಹಂಚಿಕೆ: ₹ 45,000
* ಕಾಮೆಡ್‌ ಕೆ ಮತ್ತು ಎನ್‌ಇಇಟಿ:  ₹ 3.90 ಲಕ್ಷ

ADVERTISEMENT

ಸಿಇಟಿ: ಶುಲ್ಕ ಪಾವತಿಗೆ  ಕೊನೆ ದಿನ ಇಂದು

ಬೆಂಗಳೂರು: ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸಿಇಟಿ ಎರಡನೇ ಸುತ್ತಿನಲ್ಲಿ ಸೀಟು ಪಡೆದ ವಿದ್ಯಾರ್ಥಿ ಗಳು ಶುಲ್ಕ ಪಾವತಿಸಲು ಗುರುವಾ ರದವರೆಗೆ (ಇದೇ 21) ಅವಕಾಶ ಇದೆ. ಈ ಹಿಂದಿನ ವೇಳಾಪಟ್ಟಿ ಪ್ರಕಾರ ಶುಲ್ಕ ಪಾವತಿಸಲು ಜುಲೈ 20 ಕೊನೆಯ ದಿನವಾಗಿತ್ತು. ಅದನ್ನು ಒಂದು ದಿನ ವಿಸ್ತರಿಸಲಾಗಿದೆ.  ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಇದೇ 22ರವರೆಗೆ ಅವಕಾಶ ಕಲ್ಪಿಸಲಾ ಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.