ADVERTISEMENT

ಸಾಂಸ್ಕೃತಿಕ ಕೇಂದ್ರಕ್ಕೆ ನಾಮಕರಣ

ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ಬೆಂಗಳೂರು: ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಮಂಡಳಿಗೆ  ರಾಜ್ಯದ ಸಾಹಿತಿ ಪ್ರೊ. ಓ.ಎಲ್. ನಾಗಭೂಷಣ್ ಸ್ವಾಮಿ, ಚಿತ್ರಕಲಾವಿದ ಸುಭಾಷ್ ಕುಮಾರ್ ಮತ್ತು ಸಂಗೀತಗಾರ ಡಾ. ಮೃತ್ಯುಂಜಯ ಅಗಡಿ ಅವರನ್ನು ನಾಮಕರಣ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ತಿಳಿಸಿದೆ.

ಪಾರ್ಸೆಲ್‌ ಬುಕ್ಕಿಂಗ್ ರದ್ದು
ಹುಬ್ಬಳ್ಳಿ:
ಸಂಚಾರ ದಟ್ಟಣೆಯ ನಿಯಂತ್ರಣ­ಕ್ಕಾಗಿ ನೈರುತ್ಯ ರೈಲ್ವೆಯು, ಮೈಸೂರು ವಿಭಾಗದ 45 ರೈಲು ನಿಲ್ದಾಣಗಳಿಂದ ಸರಕು (ಪಾರ್ಸೆಲ್‌) ಬುಕ್ಕಿಂಗ್ ವ್ಯವಸ್ಥೆಯನ್ನು ಶಾಶ್ವತವಾಗಿ ರದ್ದುಪಡಿ­ಸಿದೆ.

ಅಶೋಕಪುರ, ಬೆಳಗುಳ, ಸಾಗರಕಟ್ಟೆ, ಹೊಸ ಅಗ್ರಹಾರ, ಅಕ್ಕಿಹೆಬ್ಬಾಳು, ಮಂದಗೆರೆ, ಹಬ್ಬನಘಟ್ಟ, ಬಾಗೇಶಪುರ, ಮಾವಿನಕೆರೆ, ಬಂಟ್ವಾಳ, ನರಿಮೊಗರು, ಎಡಮಂಗಲ, ಸಿರಿಬಾಗಿಲು, ಎಡಕುಮೇರಿ, ದೋಣಿಗಲ್, ನೇರಳಕಟ್ಟೆ , ಬಳ್ಳೇಕೆರೆ, ದೇವನೂರು, ಅದಿಹಳ್ಳಿ, ಹೊನ್ನವಳ್ಳಿ ರಸ್ತೆ, ಕರಡಿ, ಸಂಪಿಗೆ ರಸ್ತೆ, ಮಲ್ಲಸಂದ್ರ, ತಾಳಗುಪ್ಪ, ಸಾಗರ ಜಂಬುಗಾರು, ಆನಂದಪುರ, ಕುಂಸಿ, ಮಸಾರಹಳ್ಳಿ, ಶಿವಪುರ, ನಾಗವಂಗಲ, ಅಜ್ಜಂಪುರ, ಶಿವನಿ, ಹೊಸದುರ್ಗ ರಸ್ತೆ, ಹೊಳಲ್ಕೆರೆ, ತೋಳಹುಣಸೆ, ಕೊಡಗನೂರು, ಮಾಯಕೊಂಡ, ಸಾಸಲು, ಅಮೃತಾಪುರ , ಬಾಲೇನಹಳ್ಳಿ, ತಳುಕು, ಬಿ.ಜಿ.ಕೆರೆ, ದೇವರಗುಡ್ಡ ಹಾಗೂ ಕರ್ಜಗಿ  ನಿಲ್ದಾಣಗಳಿಂದ ಸರಕು ಸಾಗಿಸುವ ಹಾಗೂ ಇಳಿಸುವ ವ್ಯವಸ್ಥೆ ಇನ್ನು ಮುಂದೆ ಇರುವುದಿಲ್ಲ. ಆದರೆ ಪ್ರಯಾಣಿಕರು ತಮ್ಮೊಂದಿಗೆ ತರುವ ಸರಕುಗಳನ್ನು ಕೊಂಡೊಯ್ಯಲು ಮಾತ್ರ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿ.ಇ ಫಲಿತಾಂಶ ಇಂದು
ಬೆಳಗಾವಿ:
ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ಕಳೆದ ಮೇ ಮತ್ತು ಜೂನ್‌ನಲ್ಲಿ ನಡೆಸಿದ ಬಿ.ಇ 6ನೇ ಸೆಮಿಸ್ಟರ್‌ ಪರೀಕ್ಷೆಯ ಬೆಂಗಳೂರು ವಿಭಾಗದ ಫಲಿತಾಂಶವು ಜುಲೈ 29ರಂದು ರಾತ್ರಿ 9 ಗಂಟೆಯ ಬಳಿಕ ಪ್ರಕಟಗೊಳ್ಳಲಿದೆ.

ವಿ.ವಿ ವೆಬ್‌ಸೈಟ್‌ http://results.vtu.ac.in ಅಥವಾ ಮೊಬೈಲ್‌ನಲ್ಲಿ RESULT(space)USN­(space) email-id ಟೈಪ್‌ ಮಾಡಿ 5424204 ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಿ ಫಲಿತಾಂಶ  ಪಡೆಯಬಹುದು.

‘ಸಹಾರನಪುರ ಪರಿಸ್ಥಿತಿ ಶಾಂತ’
ನವದೆಹಲಿ/ಲಖನೌ (ಪಿಟಿಐ/ಐಎಎನ್‌ಎಸ್‌): ‘
ಉತ್ತರಪ್ರದೇಶದ ಹಿಂಸಾಪೀಡಿತ ಸಹಾರನಪುರದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ’  ಎಂದು ಗೃಹ ಸಚಿವ ರಾಜನಾಥ್‌್ ಸಿಂಗ್‌್ ಸೋಮ­ವಾರ ಸುದ್ದಿಗಾರರಿಗೆ ತಿಳಿಸಿದರು. ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಗೃಹ ಸಚಿವಾಲಯವು ಈಗಾಗಲೇ 600 ಅರೆಸೇನಾ ಪಡೆ ಸಿಬ್ಬಂದಿಯನ್ನು ಕಳಿಸಿದೆ.

ಲಷ್ಕರ್‌ ಪ್ರಮುಖನ ಬಂಧನ
ನವದೆಹಲಿ (ಪಿಟಿಐ):
ಧರ್ಮ ಬೋಧನೆ ಹಾಗೂ ದೇಶದಾದ್ಯಂತ ಭಯೋತ್ಪಾದಕ ದಾಳಿ ಸಂಚು ರೂಪಿಸುತ್ತಿದ್ದ ಲಷ್ಕರ್‌–ಎ–ತೈಯಬಾ ಪ್ರಮುಖ ಸದಸ್ಯ ಅಬ್ದುಲ್‌ ಸುಭಾನ್‌ ಎಂಬಾತನನ್ನು ರಾಜಧಾನಿಯ ಸರೈ ಕಾಲೆ ಖಾನ್‌ ಬಸ್‌ ನಿಲ್ದಾಣದಲ್ಲಿ ಕಳೆದ ವಾರ ಬಂಧಿಸಲಾಗಿದ್ದು, ವಿಚಾರಣೆಗೆ ಗುರಿಪಡಿಸಲಾಗಿದೆ.

ನಿತ್ಯ ಐದು ಮಕ್ಕಳ ಸಾವು
ನವದೆಹಲಿ (ಪಿಟಿಐ):
ಚಂಡೀಗಡದ ವೈದ್ಯಕೀಯ ಶಿಕ್ಷಣ ಮತ್ತು ಸ್ನಾತಕೋತ್ತರ ಸಂಶೋಧನಾ ಸಂಸ್ಥೆಯಲ್ಲಿ ಪ್ರತಿನಿತ್ಯ 13 ವರ್ಷದೊಳಗಿನ ಸರಾಸರಿ ಐದು ಮಕ್ಕಳು ಸಾವನ್ನಪ್ಪುತ್ತಿದ್ದಾರೆ.  ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ವರದಿಯಿಂದ ಈ ಅಂಶ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.