ADVERTISEMENT

ಹುಬ್ಬಳ್ಳಿ: ಕಟ್ಟಡ ಕುಸಿದು 6 ಸಾವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 19:30 IST
Last Updated 8 ಫೆಬ್ರುವರಿ 2016, 19:30 IST
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಆವರಣದಲ್ಲಿ ಪಾರ್ಸೆಲ್‌ ಬುಕಿಂಗ್‌ ಕಚೇರಿಯ ಕಟ್ಟಡ ನೆಲಕ್ಕುರುಳಿದ ದೃಶ್ಯ 	ಚಿತ್ರ: ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಆವರಣದಲ್ಲಿ ಪಾರ್ಸೆಲ್‌ ಬುಕಿಂಗ್‌ ಕಚೇರಿಯ ಕಟ್ಟಡ ನೆಲಕ್ಕುರುಳಿದ ದೃಶ್ಯ ಚಿತ್ರ: ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದಲ್ಲಿನ ಪಾರ್ಸೆಲ್‌ ಬುಕ್ಕಿಂಗ್‌, ಪೊಲೀಸ್‌ ಠಾಣೆ ಕಟ್ಟಡ ಕುಸಿದು ಆರು ಜನ ಮೃತಪಟ್ಟು 11 ಮಂದಿ ಗಾಯಗೊಂಡ ದಾರುಣ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಕಟ್ಟಡದ ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ಇದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡ ತಡರಾತ್ರಿಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಿತು.

ನಗರದ ನಿವಾಸಿ ಕೈಲಾಸ ರಂಜನ್‌ (68), ಸಂಡೂರಿನ ಎಂ.ಗಾಳೆಪ್ಪ (39), ಬುಕ್ಕಿಂಗ್ ಕಚೇರಿಯ ವಾಣಿಜ್ಯ ವಿಭಾಗದ ಮುಖ್ಯ ಗುಮಾಸ್ತ ತಿಮ್ಮಾರೆಡ್ಡಿ (50), ಕೂಲಿ ಕಾರ್ಮಿಕ, ನಗರದ ಘಂಟಿಕೇರಿ ನಿವಾಸಿ ಸಲೀಂ ರಫೀಕ್‌ ಈಟಿ (38),  ಪೊಲೀಸ್‌ ಇನ್‌ಸ್ಪೆಕ್ಟರ್‌ ಕಚೇರಿ ರೈಟರ್‌, ಶಿಗ್ಗಾವಿಯ ಬಾಡ ಗ್ರಾಮದ ಸಿದ್ದಯ್ಯ ಹಿರೇಮಠ (32),  ಪೊಲೀಸ್‌ ಕಚೇರಿ ದ್ವಿತೀಯ ದರ್ಜೆ ಸಹಾಯಕಿ ದಾಕ್ಷಾಯಿಣಿ ಗೌಡರ  (35) ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT