ಬೆಂಗಳೂರು: ಸ್ಥಳಾಂತರಗೊಳ್ಳುವ ಹೆದ್ದಾರಿ ಬದಿಯ ಮದ್ಯದ ಅಂಗಡಿಗಳಿಗೆ ಪರವಾನಗಿ ನವೀಕರಣ ಶುಲ್ಕದಲ್ಲಿ ಶೇ 50ರಷ್ಟು ವಿನಾಯಿತಿ ಪ್ರಕಟಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಮೂರು ತಿಂಗಳ ಒಳಗೆ ಸ್ಥಳಾಂತರ ಮಾಡಿಕೊಳ್ಳುವ ಸಿಎಲ್–2 ದರ್ಜೆಯ ಅಂಗಡಿಗಳಿಗೆ ಮಾತ್ರ ಈ ವಿನಾಯಿತಿ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಿಎಲ್–2 ದರ್ಜೆ ಪರವಾನಗಿ ನವೀಕ ರಣ ಶುಲ್ಕ ₹2.25 ಲಕ್ಷ ಇದ್ದು, ಸ್ಥಳಾಂತರ ಆಗುವ ಅಂಗಡಿ ಗಳಿಗೆ ಅದರ ಲ್ಲೂ ಶೇ 50ರಷ್ಟು ವಿನಾಯಿತಿ ಸಿಗಲಿದೆ. ಸುಪ್ರೀಂ ಆದೇಶ ದಿಂದ ಮದ್ಯದಂಗಡಿ ಮಾಲೀಕರು ಕಷ್ಟಕ್ಕೆ ಸಿಲುಕಿರುವುದರಿಂದ 2017–18ನೇ ಸಾಲಿನ ನವೀಕರಣಕ್ಕೆ ಮಾತ್ರ ಈ ವಿನಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.