ADVERTISEMENT

ನಂಜನಗೂಡು: ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ನಂಜನಗೂಡು ತಾಲ್ಲೂಕಿನ ಎಂ.ಕೊಂಗಳ್ಳಿ ಗ್ರಾಮದ ರೈತ ನಾಗಣ್ಣ ಎಂಬುವವರ ಜಮೀನಿನಲ್ಲಿ ಶನಿವಾರ ತಡರಾತ್ರಿ ಬೋನಿಗೆ ಬಿದ್ದ ಚಿರತೆ
ನಂಜನಗೂಡು ತಾಲ್ಲೂಕಿನ ಎಂ.ಕೊಂಗಳ್ಳಿ ಗ್ರಾಮದ ರೈತ ನಾಗಣ್ಣ ಎಂಬುವವರ ಜಮೀನಿನಲ್ಲಿ ಶನಿವಾರ ತಡರಾತ್ರಿ ಬೋನಿಗೆ ಬಿದ್ದ ಚಿರತೆ   

ನಂಜನಗೂಡು: ತಾಲ್ಲೂಕಿನ ಎಂ.ಕೊಂಗಳ್ಳಿ ಗ್ರಾಮದ ರೈತ ನಾಗಣ್ಣ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶನಿವಾರ ತಡರಾತ್ರಿ 3 ವರ್ಷದ ಗಂಡು ಚಿರತೆ ಬಿದ್ದಿದೆ.

ಇದೇ ಪ್ರದೇಶದಲ್ಲಿ ಶುಕ್ರವಾರ ಹಸುವಿನ ಮೇಲೆ ದಾಳಿ ಮಾಡಿ ಅರ್ಧ ಭಾಗ ತಿಂದು ಹಾಕಿತ್ತು. ಗ್ರಾಮದ ಆಸುಪಾಸಿನಲ್ಲಿ ಜಾನುವಾರು ಮೇಲೆ ಆಗಾಗ ದಾಳಿ ನಡೆಸುತ್ತಿದ್ದ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಇದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಈ ಪ್ರದೇಶದಲ್ಲಿ ಬೋನು ಇಟ್ಟು, ಹಸುವಿನ ಉಳಿದ ಅರ್ಧ ಭಾಗದ ಮಾಂಸ ಹಾಕಿದ್ದರು. ಇದನ್ನು ತಿನ್ನಲು ಬಂದು ಬೋನಿಗೆ ಬಿದ್ದಿದೆ. ಬಂಡೀಪುರ ಅಥವಾ ನಾಗರಹೊಳೆ ಉದ್ಯಾನಕ್ಕೆ ಬಿಡಲಾಗುವುದು ಎಂದು ಆರ್‌ಫ್ಒ ಜಯಶೇಖರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT