ADVERTISEMENT

ವಿ.ವಿ ಆವರಣದಲ್ಲಿ ಚಿತ್ರೀಕರಣಕ್ಕೆ ಅನುಮತಿ ನಿರಾಕರಣೆ

ರವೀಂದ್ರನಾಥ ಟ್ಯಾಗೋರ್‌ ಅವರ ಪ್ರೇಮಕಥೆ ಆಧಾರಿತ ಚಿತ್ರ

ಪಿಟಿಐ
Published 1 ಜುಲೈ 2018, 19:49 IST
Last Updated 1 ಜುಲೈ 2018, 19:49 IST

ಕೋಲ್ಕತ್ತ : ರವೀಂದ್ರನಾಥ ಟ್ಯಾಗೋರ್‌ ಅವರ ಪ್ರೇಮಕಥೆ ಆಧಾರಿತ, ನಟಿ ಪ್ರಿಯಾಂಕಾ ಚೋಪ್ರ ನಿರ್ಮಾಣದ ‘ನಳಿನಿ’ ಚಿತ್ರವನ್ನು ಕ್ಯಾಂಪಸ್‌ ಆವರಣದಲ್ಲಿ ಚಿತ್ರೀಕರಿಸಲು ಅನುಮತಿ ನೀಡುವುದಕ್ಕೆ ವಿಶ್ವ ಭಾರತಿ ವಿಶ್ವವಿದ್ಯಾಲಯ ನಿರಾಕರಿಸಿದೆ.

‘ಚಿತ್ರಕಥೆ ಕುರಿತು ಟ್ಯಾಗೋರ್‌ ಆಶ್ರಮದ ನಿವಾಸಿಗಳು ಮತ್ತು ತಜ್ಞರು ಸೇರಿದಂತೆ ವಿಶ್ವವಿದ್ಯಾಲಯದ ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಕ್ಯಾಂಪಸ್‌ ಆವರಣದೊಳಗೆ ಇಂತಹ ಚಿತ್ರದ ಚಿತ್ರೀಕರಣವನ್ನು ನಾವು ಒಪ್ಪುವುದಿಲ್ಲ’ ಎಂದು ಕುಲಪತಿ ಸಬುಜ್‌ ಕೋಲಿ ಸೆನ್‌ ಹೇಳಿದ್ದಾರೆ.

‘ವಾಣಿಜ್ಯ ಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವ ಮೂಲಕ ವಿಶ್ವವಿದ್ಯಾಲಯದ ವಾತಾವರಣಕ್ಕೆ ಧಕ್ಕೆಯುಂಟು ಮಾಡಲು ನಾವು ಬಯಸುವುದಿಲ್ಲ. ಈ ಬಗ್ಗೆ ಚಿತ್ರದ ನಿರ್ದೇಶಕ ಉಜ್ವಲ್‌ ಚಟರ್ಜಿ ಅವರಿಗೆ ತಿಳಿಸಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಹಿಂದಿನ ಕುಲಪತಿ ಸ್ವಪನ್‌ ಕುಮಾರ್‌ ದತ್ತ ಅವರು ಕ್ಯಾಂಪಸ್‌ನಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದರು. ಆದರೆ, ಈಗ ನಿರಾಕರಿಸಲಾಗಿದೆ. ಈ ವಿಚಾರವಾಗಿ ಮಧ್ಯಪ್ರವೇಶಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಮನವಿ ಮಾಡುತ್ತೇನೆ’ ಎಂದು ನಿರ್ದೇಶಕ ಚಟರ್ಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.