ADVERTISEMENT

ಅಣು ಶಕ್ತಿಯನ್ನು ಭಾರತ ಶಸ್ತ್ರಾಸ್ತ್ರ ತಯಾರಿಗೆ ಬಳಸುತ್ತಿದೆ: ಪಾಕಿಸ್ತಾನ ಆರೋಪ

ಪಿಟಿಐ
Published 19 ಮೇ 2017, 11:46 IST
Last Updated 19 ಮೇ 2017, 11:46 IST
ನಫೀಜ್ ಝಕಾರಿಯಾ
ನಫೀಜ್ ಝಕಾರಿಯಾ   

ಇಸ್ಲಾಮಾಬಾದ್: ಶಾಂತಿಯುತ ಉದ್ದೇಶಗಳಿಗಾಗಿ ಖರೀದಿಸುವ ಪರಮಾಣು ಶಕ್ತಿಯನ್ನು ಭಾರತ ಶಸ್ತ್ರಾಸ್ತ್ರ ತಯಾರಿಗೆ ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.

ಪರಮಾಣು ಪೂರೈಕೆದಾರರ ಸಮೂಹದ (ಎನ್‌ಎಸ್‌ಜಿ) ಒಪ್ಪಂದಗಳಿಂದ ವಿನಾಯಿತಿ ಪಡೆದು ಭಾರತವು ಆಮದು ಮಾಡಿಕೊಳ್ಳುವ ಪರಮಾಣು ಇಂಧನ, ಉಪಕರಣ ಮತ್ತು ತಂತ್ರಜ್ಞಾನವನ್ನು ಶಸ್ತ್ರಾಸ್ತ್ರ ತಯಾರಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಹಲವು ವರ್ಷಗಳಿಂದ ಪಾಕಿಸ್ತಾನಕ್ಕೆ ಆತಂಕವಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನಫೀಜ್ ಝಕಾರಿಯಾ ಆರೋಪಿಸಿದ್ದಾರೆ.

‘ಪರಮಾಣು ಶಕ್ತಿಯನನ್ನು ಭಾರತವು ದುರ್ಬಳಕೆ ಮಾಡುತ್ತಿರುವುದು ಅಣ್ವಸ್ತ್ರ ಪ್ರಸರಣ ವಿಷಯಕ್ಕೆ ಸಂಬಂಧಿಸಿ ಮಾತ್ರ ಆತಂಕಕಾರಿಯಲ್ಲ. ದಕ್ಷಿಣ ಏಷ್ಯಾದ ಪ್ರಾದೇಶಿಕ ಭದ್ರತೆ ಹಾಗೂ ಪಾಕಿಸ್ತಾನದ ಭದ್ರತೆಗೂ ಆತಂಕ ತಂಡೊಡ್ಡಿದೆ. ಭಾರತದ ಅಣ್ವಸ್ತ್ರ ಯೋಜನೆ ವಿಶ್ವದಲ್ಲೇ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.