ADVERTISEMENT

ಅತಿ ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆ ಅಪಾಯ

ಹದಿಹರೆಯದವರಲ್ಲಿ ಖಿನ್ನತೆ, ಆತ್ಮಹತ್ಯೆಗೆ ಪ್ರಚೋದನೆ

ಪಿಟಿಐ
Published 16 ನವೆಂಬರ್ 2017, 19:54 IST
Last Updated 16 ನವೆಂಬರ್ 2017, 19:54 IST
ಅತಿ ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆ ಅಪಾಯ
ಅತಿ ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆ ಅಪಾಯ   

ವಾಷಿಂಗ್ಟನ್‌: ಅತಿಯಾಗಿ ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ಗಳನ್ನು ಬಳಸುವುದರಿಂದ ಹದಿಹರೆಯದವರಲ್ಲಿ ಖಿನ್ನತೆ ಹೆಚ್ಚಬಹುದು ಮತ್ತು ಆತ್ಮಹತ್ಯೆಗೆ ಪ್ರಚೋದನಕಾರಿ ನಡವಳಿಕೆಗೂ ಕಾರಣವಾಗಬಹುದು ಎಂದು ಅಧ್ಯಯನವೊಂದು ಎಚ್ಚರಿಕೆ ನೀಡಿದೆ.

ವಿಶೇಷವಾಗಿ ಬಾಲಕಿಯರಲ್ಲಿ ಈ ರೀತಿ ಬದಲಾವಣೆಗಳು ಕಾಣುತ್ತವೆ ಎಂದು ತಿಳಿಸಿದೆ. 5 ಲಕ್ಷಕ್ಕೂ ಹೆಚ್ಚು ಹದಿಹರೆಯದವರಿಗೆ ನೀಡಲಾಗಿದ್ದ ಪ್ರಶ್ನಾವಳಿಗಳಿಂದ ದೊರೆತ ಉತ್ತರವನ್ನು ವಿಶ್ಲೇಷಣೆ ಮಾಡಿ ನಡವಳಿಕೆಗಳ ಬಗ್ಗೆ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

‘ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ’ ಎಂದು ಸ್ಯಾನ್‌ ಡಿಯಾಗೋ ವಿಶ್ವವಿದ್ಯಾಲಯದ ಜೀನ್‌ ತ್ವೆಂಗ್‌ ಹೇಳಿದ್ದಾರೆ.

ADVERTISEMENT

‘2010 ಮತ್ತು 2015ರ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯರ ಸಂಖ್ಯೆ ಶೇ 65ರಷ್ಟು ಹೆಚ್ಚಾಗಿದೆ. ಆತ್ಮಹತ್ಯೆ ಬಗ್ಗೆ ಯೋಚಿಸುವವರ ಸಂಖ್ಯೆಯಲ್ಲೂ ಶೇ 12ರಷ್ಟು ಹೆಚ್ಚಳವಾಗಿದೆ. ಹದಿಹರೆಯದವರಲ್ಲಿನ ಖಿನ್ನತೆ ಪ್ರಮಾಣವೂ ಶೇ 58ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.