ADVERTISEMENT

ಅನ್ಯಗ್ರಹ ಜೀವಿ: ಹಾಕಿಂಗ್‌ ಎಚ್ಚರಿಕೆ

ಪಿಟಿಐ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ಸ್ಟೀಫನ್‌ ಹಾಕಿಂಗ್‌
ಸ್ಟೀಫನ್‌ ಹಾಕಿಂಗ್‌   

ಲಂಡನ್ :  ಅನ್ಯಗ್ರಹ ಜೀವಿಗಳನ್ನು (ಏಲಿಯನ್ಸ್‌) ಸಂಪರ್ಕಿಸುವುದರ ವಿರುದ್ಧ ಬ್ರಿಟನ್‌ನ ಭೌತವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಎಚ್ಚರಿಕೆ ನೀಡಿದ್ದಾರೆ.

ಮಾನವರಿಗಿಂತಲೂ ತಾಂತ್ರಿಕವಾಗಿ ಸಾಕಷ್ಟು ಮುಂದುವರಿದಿರಬಹುದಾದ ಅನ್ಯಗ್ರಹ ಜೀವಿಗಳೊಂದಿಗಿನ ನಮ್ಮ ಮೊದಲ ಭೇಟಿಯು, ಮೂಲ ಅಮೆರಿಕನ್ನರು ಮತ್ತು ಕ್ರಿಸ್ಟೊಫರ್‌ ಕೊಲಂಬಸ್‌ ನಡುವಣ ಮುಖಾಮುಖಿಯಂತೆ ಆಗಬಹುದು. ಇದರಿಂದ ಒಳಿತಾಗುವ ಸಾಧ್ಯತೆ ಇಲ್ಲ ಎಂದು ಹಾಕಿಂಗ್‌ ಅವರು ತಮ್ಮ ನೆಚ್ಚಿನ ತಾಣಗಳ ಕುರಿತು ವಿವರಿಸುವ ನೂತನ ಅಂತರ್ಜಾಲ  ಸಿನಿಮಾದಲ್ಲಿ ಹೇಳಿದ್ದಾರೆ.

‘ಮುಂದೊಂದು ದಿನ ನಾವು ಗ್ಲೀಸ್‌ 832ಸಿನಂತಹ ಗ್ರಹದಿಂದ ಸಂಕೇತಗಳನ್ನು ಪಡೆದುಕೊಳ್ಳಬಹುದು. ಆದರೆ ನಾವು ಅದಕ್ಕೆ ಪ್ರತಿ ಉತ್ತರ ನೀಡುವಷ್ಟು ಜಾಗರೂಕತೆಯಿಂದ ಇರಬೇಕು. ಅನ್ಯಗ್ರಹ ಜೀವಿಗಳು ಹೆಚ್ಚು ಶಕ್ತಿಶಾಲಿಯಾಗಿರಬಹುದು. ನಾವು ಬ್ಯಾಕ್ಟೀರಿಯಾಗಳನ್ನು ನೋಡುವಂತೆಯೇ, ಆ ಜೀವಿಗಳು ನಮ್ಮನ್ನು ನೋಡಬಹುದು’ ಎಂದು ಹಾಕಿಂಗ್‌ ಎಚ್ಚರಿಕೆ ನೀಡಿದ್ದಾರೆ.

‘ನಾನು ಬೆಳೆದಂತೆ, ನಾವು ಒಂಟಿಯಲ್ಲ ಎಂಬ ನಂಬಿಕೆ ದೃಢವಾಗುತ್ತಾ ಹೋಯಿತು. ಈ ಅಚ್ಚರಿಯ ಕಾಲ ಕಳೆದ ಬಳಿಕ ನಾನು ಅದನ್ನು ಪತ್ತೆಹಚ್ಚುವ ಹೊಸ ಜಾಗತಿಕ ಪ್ರಯತ್ನಕ್ಕೆ ನೆರವಾಗುತ್ತಿದ್ದೇನೆ’ ಎಂದು ಹಾಕಿಂಗ್‌ ಹೇಳಿರುವುದಾಗಿ ‘ದಿ ಗಾರ್ಡಿಯನ್‌’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.