ADVERTISEMENT

ಅಮೆರಿಕ: ಆರ್ಥಿಕ ರಾಯಭಾರಿ ಹುದ್ದೆಗೆ ಮನೀಷಾ ಸಿಂಗ್ ನೇಮಕ

ಪಿಟಿಐ
Published 12 ಸೆಪ್ಟೆಂಬರ್ 2017, 19:33 IST
Last Updated 12 ಸೆಪ್ಟೆಂಬರ್ 2017, 19:33 IST
ಅಮೆರಿಕ: ಆರ್ಥಿಕ ರಾಯಭಾರಿ ಹುದ್ದೆಗೆ ಮನೀಷಾ ಸಿಂಗ್ ನೇಮಕ
ಅಮೆರಿಕ: ಆರ್ಥಿಕ ರಾಯಭಾರಿ ಹುದ್ದೆಗೆ ಮನೀಷಾ ಸಿಂಗ್ ನೇಮಕ   

ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತ ಸಂಜಾತ ವಕೀಲೆ ಮನೀಷಾ ಸಿಂಗ್ ಅವರನ್ನು ಆರ್ಥಿಕ ರಾಯಭಾರಿ ಹುದ್ದೆಯ ಉಸ್ತುವಾರಿಯಾಗಿ ನೇಮಕ ಮಾಡಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶ ಹೊರಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಜನಿಸಿದ ಸಿಂಗ್ ಅವರು ಬಾಲ್ಯದಲ್ಲಿಯೇ ತಮ್ಮ ಪೋಷಕರೊಂದಿಗೆ ಫ್ಲಾರಿಡಾಗೆ ತೆರಳಿದ್ದರು. ಪ್ರಸ್ತುತ ಸೆನೆಟರ್ ಡಾನ್ ಸಲೈವನ್ ಅವರ ಸಲಹೆಗಾರರಾಗಿ ಸಿಂಗ್ ಕಾರ್ಯನಿರ್ವಹಿಸುತ್ತಿದ್ದಾರೆ.

ಟ್ರಂಪ್ ಅವರು ಜನವರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಆರ್ಥಿಕ ರಾಯಭಾರಿಯಾಗಿದ್ದ ಚಾರ್ಲ್ಸ್ ರಿವ್‌ಕಿನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆಗಿನಿಂದ ಈ ಹುದ್ದೆ ಖಾಲಿ ಇತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.