ADVERTISEMENT

ಅಮೆರಿಕ ಕಠಿಣ ನಿರ್ಬಂಧ

ಏಜೆನ್ಸೀಸ್
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST
ಅಮೆರಿಕ ಕಠಿಣ ನಿರ್ಬಂಧ
ಅಮೆರಿಕ ಕಠಿಣ ನಿರ್ಬಂಧ   

ವಾಷಿಂಗ್ಟನ್: ಇರಾನ್, ಉತ್ತರ ಕೊರಿಯಾ ಮತ್ತು ರಷ್ಯಾ ಮೇಲೆ ಹೊಸದಾಗಿ ಕಠಿಣ ನಿರ್ಬಂಧಗಳನ್ನು ಹೇರುವ ನಿರ್ಣಯವನ್ನು ಅಮೆರಿಕದ ಸಂಸತ್ತು ಮಂಗಳವಾರ ಅಂಗೀಕರಿಸಿದೆ.

‘ಅಮೆರಿಕದ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಅಪಾಯಕಾರಿ ಎದುರಾಳಿಗಳನ್ನು ನಿರ್ಬಂಧಿಸಲು ಈ ನಿರ್ಣಯ ಸಹಕಾರಿ’ ಎಂದು ಸಭಾಧ್ಯಕ್ಷ ಪಾಲ್ ರ್‍ಯಾನ್ ಹೇಳಿದ್ದಾರೆ.

ಈ ನಿರ್ಧಾರದ ವಿರುದ್ಧ ರಷ್ಯಾ ಕೋಪಗೊಳ್ಳುವ ಮತ್ತು ಐರೋಪ್ಯ ರಾಷ್ಟ್ರಗಳ ಆರ್ಥಿಕತೆ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ADVERTISEMENT

‘ತೃತೀಯಲಿಂಗಿಗಳಿಗೆ ಸ್ಥಳವಿಲ್ಲ’: ಸೇನೆಯ ಯಾವುದೇ ಹುದ್ದೆಗಳಲ್ಲಿ ತೃತೀಯ ಲಿಂಗಿಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

ತೃತೀಯ ಲಿಂಗಿಗಳು ಸೇನೆಯಲ್ಲಿ ಇದ್ದರೆ ಭಾರಿ ವೈದ್ಯಕೀಯ ವೆಚ್ಚ ಆಗುತ್ತದೆ ಮತ್ತು ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತದೆ ಎಂದು ಅವರು ಕಾರಣ ನೀಡಿದ್ದಾರೆ. ಅಂದಾಜು 2,500ರಿಂದ 7,000 ತೃತೀಯಲಿಂಗಿಗಳು ಅಮೆರಿಕ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.