ADVERTISEMENT

ಅಮೆರಿಕ, ದ.ಕೊರಿಯಾ ವಿರುದ್ಧ ಉತ್ತರ ಕೊರಿಯಾ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST

ಸೋಲ್‌ (ಪಿಟಿಐ): ದಾಳಿ  ಮಾಡುವಂತೆ ಪ್ರಚೋದನೆ ನೀಡುವ ಅಮೆರಿಕ ಮತ್ತು ದಕ್ಷಿಣ ಕೊರಿಯಾ ವಿರುದ್ಧ ಉತ್ತರ ಕೊರಿಯಾ ಗುಡುಗಿದೆ. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾವನ್ನು ಪ್ರತ್ಯೇಕಿಸುವ ಗಡಿಭಾಗದ ಸೇನಾರಹಿತ ವಲಯದ  ಗ್ರಾಮದ ಬಳಿ  ಪ್ರಚೋದನಾ ಕೃತ್ಯ   ನಡೆಸುತ್ತಿದೆ ಎಂದು ಉತ್ತರ ಕೊರಿಯಾ ಆರೋಪಿಸಿದೆ.  

ಪ್ರಚೋದನೆ ಹೀಗೆ ಮುಂದುವ ರಿದರೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಸೇನೆ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ. ಇದಕ್ಕೆ ದಕ್ಷಿಣ ಕೊರಿಯಾ  ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.