ಬೈರೂತ್ (ಎಎಫ್ಪಿ): ಇರಾಕ್ ಮೇಲೆ ಅಮೆರಿಕ ನಡೆಸುತ್ತಿರುವ ವಾಯು ದಾಳಿಗೆ ಪ್ರತೀಕಾರವಾಗಿ ಅಮೆರಿಕದ ಪತ್ರಕರ್ತ ಜೇಮ್ಸ್ ಫೋಲಿ ಅವರ ತಲೆ ಕತ್ತರಿಸಲಾಗಿದೆ ಎಂದು ಜಿಹಾದಿ ಗುಂಪು ಇಸ್ಲಾಮಿಕ್ ಸ್ಟೇಟ್ ಹೇಳಿಕೊಂಡಿದೆ.
ಮುಸುಕು ಹಾಕಿಕೊಂಡಿರುವ ಉಗ್ರರು ಪತ್ರಕರ್ತ ಫೋಲಿ ಅವರ ತಲೆ ಕತ್ತರಿಸುವ ದೃಶ್ಯಗಳಿರುವ ವಿಡಿಯೊವನ್ನು ಉಗ್ರರು ಬಿಡುಗಡೆ ಮಾಡಿದ್ದಾರೆ. 2012ರ ನವೆಂಬರ್ನಲ್ಲಿ ಶಸ್ತ್ರಧಾರಿ ಉಗ್ರರು ಫೋಲಿ ಅವರನ್ನು ಸಿರಿಯಾದಿಂದ ಅಪಹರಿಸಿದ್ದರು.
ಅನುಭವಿ ಪತ್ರಕರ್ತ ಫೋಲಿ ಲಿಬಿಯಾ ಯುದ್ಧವನ್ನು ವರದಿ ಮಾಡಿದ್ದರು. ನಂತರ ಅವರು ಗ್ಲೋಬಲ್ ಪೋಸ್ಟ್, ಎಎಫ್ಪಿ ಮುಂತಾದ ಸಂಸ್ಥೆಗಳಿಗಾಗಿ ಸಿರಿಯಾದಲ್ಲಿ ಬಷರ್ ಅಲ್ ಅಸದ್ ವಿರುದ್ಧ ನಡೆಯುತ್ತಿದ್ದ ದಂಗೆಯ ವರದಿ ಮಾಡಲು ಸಿರಿಯಾಕ್ಕೆ ಹೋಗಿದ್ದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, 2012ರ ನವೆಂಬರ್ 22ರಂದು ಉತ್ತರ ಸಿರಿಯಾದ ಇಡ್ಲಿಬ್ ಪ್ರಾಂತ್ಯದಿಂದ ಫೋಲಿ ಅವರನ್ನು ಅಪಹರಿಸಲಾಗಿತ್ತು. ಫೋಲಿ ಬಗೆಗಿನ ಮಾಹಿತಿಗಾಗಿ ಅವರ ಕುಟುಂಬ ಸಾರ್ವಜನಿಕ ಅಭಿಯಾನವನ್ನೇ ನಡೆಸಿತ್ತು. ಆದರೂ ಫೋಲಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಐದು ನಿಮಿಷದ ವಿಡಿಯೊವನ್ನು ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಉತ್ತರ ಇರಾಕ್ನಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರ ನೆಲೆಯ ಮೇಲೆ ದಾಳಿ ನಡೆಸುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆದೇಶ ನೀಡಿದ ನಂತರ ಫೋಲಿ ಹತ್ಯೆ ಮಾಡಲಾಗಿದೆ ಎಂದು ಉಗ್ರರು ಹೇಳಿಕೊಂಡಿದ್ದಾರೆ. ಮರುಭೂಮಿಯಂತಹ ಪ್ರದೇಶದಲ್ಲಿ ಫೋಲಿ ಅವರ ಹತ್ಯೆ ನಡೆಸಲಾಗಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.