ADVERTISEMENT

ಆಹಾರ ನೀಡುವ ನೆಪದಲ್ಲಿ ದೌರ್ಜನ್ಯ

ಏಜೆನ್ಸೀಸ್
Published 24 ಮೇ 2018, 19:28 IST
Last Updated 24 ಮೇ 2018, 19:28 IST

ಲಾಗೋಸ್‌: ನೈಜಿರಿಯಾದ ಸೈನಿಕರು ಅಲ್ಲಿನ ನಿರಾಶ್ರಿತರಿಗೆ ಆಹಾರ ನೀಡುವ ನೆಪದಲ್ಲಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಆರೋಪಿಸಿದೆ.

ಉಗ್ರ ಸಂಘಟನೆ ಬೊಕೊ ಹರಮ್ ದಾಳಿಯ ಪರಿಣಾಮ ನಿರಾಶ್ರಿತರಾದವರನ್ನು ಇರಿಸಲಾಗಿರುವ ಶಿಬಿರಗಳಲ್ಲಿ ನೈಜಿರಿಯಾ ಯೋಧರು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅಮ್ನೆಸ್ಟಿ ವರದಿ ನೀಡಿದೆ. ಆದರೆ ಈ ಆರೋಪವನ್ನು ನೈಜಿರಿಯಾ ಸರ್ಕಾರ ನಿರಾಕರಿಸಿದೆ.

‘ಅಮ್ನೆಸ್ಟಿಯು 2015 ಮತ್ತು 2016ರಲ್ಲಿಯೂ ಇದೇ ರೀತಿಯ ವರದಿ ನೀಡಿತ್ತು. ಪ್ರತಿ ವರ್ಷ ಇದನ್ನೇ ಅದು ಪುನರಾವರ್ತಿಸುತ್ತಿದೆ’ ಎಂದು ಅಧ್ಯಕ್ಷರ ವಕ್ತಾರ ಗರ್ಬಾ ಶೆಹು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.