ADVERTISEMENT

ಈಜಿಫ್ಟಿನಲ್ಲಿ ರೈಲು ದುರಂತ: 41 ಸಾವು

ಪಿಟಿಐ
Published 12 ಆಗಸ್ಟ್ 2017, 19:30 IST
Last Updated 12 ಆಗಸ್ಟ್ 2017, 19:30 IST
ರೈಲು ಅಪಘಾತ ನಡೆದ ಅಲೆಕ್ಸಾಂಡ್ರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ –ಎಎಫ್‌ಪಿ ಚಿತ್ರ
ರೈಲು ಅಪಘಾತ ನಡೆದ ಅಲೆಕ್ಸಾಂಡ್ರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ –ಎಎಫ್‌ಪಿ ಚಿತ್ರ   

ಕೈರೊ: ಈಜಿಪ್ಟ್‌ನ ಕರಾವಳಿ ನಗರ ಅಲೆಕ್ಸಾಂಡ್ರಿಯಾದಲ್ಲಿ ವೇಗವಾಗಿ ಬಂದ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿ 41 ಮಂದಿ ಮೃತಪಟ್ಟು 120 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

‘ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿ ಮ್ಯಾಗ್ಡಿ ಹೆಗಝಿ ತಿಳಿಸಿದ್ದಾರೆ. ಸಾವುನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಸಲಹೆಗಾರ ಶರಿಫ್ ವಾಡಿ ಹೇಳಿದ್ದಾರೆ.

75 ಆಂಬುಲೆನ್ಸ್‌ಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಅಲೆಕ್ಸಾಂಡ್ರಿಯಾದ ಎಲ್ಲ ಆಸ್ಪತ್ರೆಗಳಲ್ಲಿ ನಿಗಾ ವಹಿಸಲಾಗಿದೆ. ಅಪಘಾತದ ಕಾರಣ ತಿಳಿದುಬಂದಿಲ್ಲ.

ADVERTISEMENT

ಈಜಿಪ್ಟ್‌ನಲ್ಲಿ ರೈಲು ಅಪಘಾತ ಸಾಮಾನ್ಯ. 2016ರಲ್ಲಿ ದಕ್ಷಿಣ ಕೊರಿಯಾದ ಅಲ್‌ ಅಯಾತ್‌ ಪ್ರದೇಶದಲ್ಲಿ ರೈಲು ಹಳಿತಪ್ಪಿ ಸಂಭವಿಸಿದ ದುರಂತದಲ್ಲಿ ಐವರು ಮೃತಪಟ್ಟು, 27ಮಂದಿ ಗಾಯಗೊಂಡಿದ್ದರು. 2013ರಲ್ಲಿ 19 ಮಂದಿ, 2012ರಲ್ಲಿ 51 ಮಂದಿ, 2002ರಲ್ಲಿ 360 ಮಂದಿ ರೈಲು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.