ADVERTISEMENT

ಎಚ್‌–1ಬಿ ವೀಸಾಗೆ ಏ.2ರಿಂದ ಅರ್ಜಿ ಸಲ್ಲಿಕೆ ಆರಂಭ

ಪಿಟಿಐ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
ಎಚ್‌–1ಬಿ ವೀಸಾಗೆ ಏ.2ರಿಂದ ಅರ್ಜಿ ಸಲ್ಲಿಕೆ ಆರಂಭ
ಎಚ್‌–1ಬಿ ವೀಸಾಗೆ ಏ.2ರಿಂದ ಅರ್ಜಿ ಸಲ್ಲಿಕೆ ಆರಂಭ   

ವಾಷಿಂಗ್ಟನ್‌: ಎಚ್‌–1ಬಿ ವೀಸಾಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಏಪ್ರಿಲ್‌ 2ರಿಂದ ಪುನರಾರಂಭವಾಗಲಿದೆ ಎಂದು ಅಮೆರಿಕ ತಿಳಿಸಿದೆ.

ಅಮೆರಿಕದ ಕಂಪನಿಗಳು ಭಾರತ, ಚೀನಾದಂತಹ ದೇಶಗಳಿಂದ ವಿಶೇಷ ಪರಿಣತಿ ಇರುವವರನ್ನು ನೇಮಕ ಮಾಡಿಕೊಳ್ಳಲು ಎಚ್‌–1ಬಿ ವೀಸಾ ಅಗತ್ಯ. 2019ನೇ ಹಣಕಾಸು ವರ್ಷದ ಎಚ್‌–1ಬಿ ವೀಸಾಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈ ವರ್ಷದ ಅಕ್ಟೋಬರ್‌ 1ರಿಂದ ಆರಂಭವಾಗಲಿದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್‌) ಇದೇ ಸಂದರ್ಭದಲ್ಲಿ ತಿಳಿಸಿದೆ.

ಶುಲ್ಕ ಹೆಚ್ಚಳದ ವ್ಯಾಪ್ತಿಗೆ ಬರುವ ಎಚ್‌–1ಬಿ ವೀಸಾ ಪ್ರಕ್ರಿಯೆ ತಡೆ ಹಿಡಿದಿದ್ದು, ಅದು 2018ರ ಸೆಪ್ಟೆಂಬರ್‌ 10ರವರೆಗೂ ಮುಂದುವರಿಯುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.