ADVERTISEMENT

ಎರಡೂ ಕೈಗಳನ್ನು ಕಸಿ ಮಾಡಿಕೊಂಡ ವಿಶ್ವದ ಮೊದಲ ಬಾಲಕ

ಪಿಟಿಐ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಎರಡೂ ಕೈಗಳನ್ನು ಕಸಿ ಮಾಡಿಕೊಂಡ ವಿಶ್ವದ ಮೊದಲ ಬಾಲಕ
ಎರಡೂ ಕೈಗಳನ್ನು ಕಸಿ ಮಾಡಿಕೊಂಡ ವಿಶ್ವದ ಮೊದಲ ಬಾಲಕ   

ಲಂಡನ್‌: ಎರಡೂ ಕೈಗಳನ್ನು ಕಸಿ ಮಾಡಿಕೊಂಡ ವಿಶ್ವದ ಮೊದಲ ಬಾಲಕ ಎನಿಸಿಕೊಂಡಿರುವ ಅಮೆರಿಕದ ಜಿಯಾನ್‌ ಹಾರ್ವೆ ಈಗ ತನ್ನ ಎರಡೂ ಕೈಗಳಿಂದ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು ಶಕ್ಯನಾಗಿದ್ದಾನೆ.

ಜಿಯಾನ್‌ಗೆ ಈಗ 10 ವರ್ಷ. ಎರಡು ವರ್ಷದ ಬಾಲಕನಿದ್ದಾಗ ಇವನ ಜೀವಕ್ಕೆ ಕುತ್ತು ತರಬಲ್ಲ ಸೋಂಕು ತಗುಲಿತ್ತು. ಇದರಿಂದಾಗಿ ಇವನ ಎರಡೂ ಮುಂಗೈ ಮತ್ತು ಮೊಣಕಾಲಿಗಿಂತ ಕೆಳಗಿನ ಕಾಲಿನ ಭಾಗವನ್ನು ವೈದ್ಯರು ಕತ್ತರಿಸಿದ್ದರು. ಅವನಿಗೆ ಎಂಟು ವರ್ಷವಾದಾಗ ಕೈಗಳ ಕಸಿಕಾರ್ಯ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT