ADVERTISEMENT

ಒಡತಿಯ ಧ್ವನಿ ಅನುಕರಿಸಿ ಶಾಪಿಂಗ್‌ ಮಾಡಿದ ಗಿಳಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಬಡ್ಡಿ ತನ್ನ ಮಾಲಕಿಯ ಜೊತೆ
ಬಡ್ಡಿ ತನ್ನ ಮಾಲಕಿಯ ಜೊತೆ   

ಲಂಡನ್‌: ತನ್ನ ಮನೆಯೊಡತಿಯ ಧ್ವನಿಯನ್ನು ಸ್ವನಿಯಂತ್ರಿತ ಸ್ಮಾರ್ಟ್ ಸ್ಪೀಕರ್ ನಲ್ಲಿ ಅನುಕರಣೆ ಮಾಡಿ ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡಿದ ಗಿಳಿಯೊಂದು ಇದೀಗ ಭಾರಿ ಸುದ್ದಿ ಮಾಡಿದೆ.

ಆಗ್ನೇಯ ಲಂಡನ್‌ನ ಕೊರಿಯೆನ್‌ ಪ್ರಟೋರಿಯೆಸ್‌ ಎಂಬಾಕೆ ಸಾಕಿದ್ದ ‘ಬಡ್ಡಿ’ ಹೆಸರಿನ ಗಿಳಿ ಅಮೆಜಾನ್‌ ಆನ್‌ಲೈನ್‌ಸ್ಟೋರ್‌ನಲ್ಲಿ ಉಡುಗೊರೆ ಪೊಟ್ಟಣವನ್ನು ಆರ್ಡರ್‌ ಮಾಡಿ ತರಿಸಿಕೊಂಡಿದೆ ಎಂದು ದಿ ಸನ್‌ ವರದಿ ಮಾಡಿದೆ.

ಅಮೆಜಾನ್ ನಲ್ಲಿ ಎಕೋ ಸ್ಪೀಕರ್ ನಲ್ಲಿ ಅಲೆಕ್ಸಾ ಎಂದು ಹೇಳಿದರೆ ಸಾಕು ಅದು ಪ್ರತಿಕ್ರಿಯಿಸುತ್ತದೆ. ಸ್ಪೀಕರ್ ಬಳಿ ಕುಳಿತ ಗಿಳಿ ಅಲೆಕ್ಸಾ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ಬರುತ್ತಿದ್ದಂತೆ ಗಿಳಿ ತನ್ನದೇ ಭಾಷೆಯಲ್ಲಿ ಏನೋ ಮಾತನಾಡಿದೆ. ಅಸಲಿಗೆ ಗಿಳಿ ತನ್ನ ಒಡತಿಯನ್ನು ಮಿಮಿಕ್ರಿ ಮಾಡಿದೆಯಂತೆ. ಅಷ್ಟಕ್ಕೇ ಅಮೆಜಾನ್ ನಲ್ಲಿ ಗಿಫ್ಟ್ ಬಾಕ್ಸ್ ಬುಕ್ ಆಗಿದೆ ಎಂದು ವರದಿ ತಿಳಿಸಿದೆ.

ADVERTISEMENT

‘ಬಡ್ಡಿ ಬಹಳ ಚಟುವಟಿಕೆಯಿಂದ ಇರುತ್ತಾನೆ. ನಮ್ಮ ಮನೆಯಲ್ಲಿ ಬೆಕ್ಕು ಕೂಡಾ ಇದೆ. ಅದನ್ನೂ ಬಡ್ಡಿ ಅನುಕರಿಸುತ್ತಾನೆ. ಆಫ್ರಿಕನ್‌ ಭಾಷೆಯಲ್ಲಿ ಮಾತನಾಡುತ್ತಾನೆ. ನಾವು ರಾತ್ರಿ ಮಲಗಲು ಹೋಗುವಾಗ ಗುಡ್‌ನೈಟ್‌ ಹೇಳುತ್ತಾನೆ’ ಎಂದು ಕೊರಿಯೆನ್ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.