ADVERTISEMENT

‘ಒಬಾಮ ಕೇರ್‌’ಯೋಜನೆ ರದ್ದುಗೊಳಿಸಿದ ಟ್ರಂಪ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
‘ಒಬಾಮ ಕೇರ್‌’ಯೋಜನೆ  ರದ್ದುಗೊಳಿಸಿದ ಟ್ರಂಪ್‌
‘ಒಬಾಮ ಕೇರ್‌’ಯೋಜನೆ ರದ್ದುಗೊಳಿಸಿದ ಟ್ರಂಪ್‌   

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ‘ಒಬಾಮ ಕೇರ್‌’ ಅನ್ನು ರದ್ದು ಮಾಡಿದ್ದಾರೆ.

ಒಬಾಮ  ಅವರು ಜಾರಿಮಾಡಿದ್ದ ‘ರೋಗಿಗಳ ರಕ್ಷಣೆ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವಾ ಕಾಯ್ದೆ’ (ಒಬಾಮಕೇರ್‌) ಸರ್ಕಾರದ ಮೇಲೆ ಆರ್ಥಿಕ ಹೊರೆಯಾಗಿದ್ದು, ಅಧಿಕಾರಕ್ಕೆ ಬಂದರೆ ಮೊದಲ ದಿನವೇ ಈ ಯೋಜನೆಯನ್ನು ರದ್ದು ಮಾಡುವುದಾಗಿ ಟ್ರಂಪ್‌ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದರು.
ಅದರಂತೆ ತಮ್ಮ ಮೊದಲ ಆದೇಶದಲ್ಲೇ ಈ ಯೋಜನೆಯನ್ನು ರದ್ದು ಮಾಡಿದ್ದಾರೆ.

‘ಒಬಾಮ ಕೇರ್‌ ಬದಲು ಕೈಗೆಟಕುವ ದರದ ಆರೋಗ್ಯ ಸೇವಾ ಕಾಯ್ದೆಗೆ ಟ್ರಂಪ್‌ ಅವರು ಸಹಿ ಮಾಡಿದ್ದಾರೆ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸೀನ್‌ ಸ್ಪೈಸರ್‌ ಹೇಳಿದ್ದಾರೆ. ಆದರೆ ಆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ADVERTISEMENT

ಒಬಾಮ ಕೇರ್‌ ಯೋಜನೆ ಮೂಲಕ ಅಮೆರಿಕದ 20 ಲಕ್ಷ ಜನರಿಗೆ ಆರೋಗ್ಯ ವಿಮೆ ನೀಡಲಾಗಿದೆ. ರಿಪಬ್ಲಿಕನ್‌ ಪಕ್ಷ ಮೊದಲಿನಿಂದಲೂ ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿತ್ತು.

ಟ್ರಂಪ್‌ ಭೇಟಿಮಾಡಲಿರುವ ಮೇ
ಲಂಡನ್‌ (ಪಿಟಿಐ):
ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಅವರು ಮುಂದಿನ ವಾರ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಮಾಡಲಿದ್ದಾರೆ ಎಂದು ವರದಿಯಾಗಿದೆ. ಮೇ ಅವರು ನೂತನ ಅಧ್ಯಕ್ಷ ಟ್ರಂಪ್‌ ಅವರನ್ನು ಭೇಟಿಮಾಡುವ ಮೊದಲ ವಿದೇಶಿ ನಾಯಕಿ ಎನಿಸಲಿದ್ದಾರೆ ಎಂದು  ‘ದಿ ಡೈಲಿ ಟೆಲಿಗ್ರಾಫ್‌’ ವರದಿ ಮಾಡಿದೆ.ವರದಿಯ ಪ್ರಕಾರ ಮೇ ಅವರು ಮುಂದಿನ ಗುರುವಾರ ಓವಲ್‌ ಕಚೇರಿಯಲ್ಲಿ ಟ್ರಂಪ್‌ ಜತೆ ಮಾತುಕತೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.