ADVERTISEMENT

ಒಬಾಮ ಮೇಲೆ ಟ್ರಂಪ್‌ ಆರೋಪ

ಏಜೆನ್ಸೀಸ್
Published 4 ಮಾರ್ಚ್ 2017, 19:55 IST
Last Updated 4 ಮಾರ್ಚ್ 2017, 19:55 IST

ವಾಷಿಂಗ್ಟನ್‌ : ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಬರಾಕ್‌ ಒಬಾಮ ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಸಿದ್ದಾರೆ ಎಂದು ಡೊನಾಲ್ಡ್‌ ಟ್ರಂಪ್‌ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಅವರು ಬಿಡುಗಡೆ ಮಾಡಿಲ್ಲ.

‘ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಒಬಾಮ ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಸಿದ್ದರು. ಈ ಬಗ್ಗೆ ಯಾವುದೇ ವಕೀಲರಿಗೆ ಪ್ರಕರಣ ದಾಖಲಿಸಬಹುದು’ ಎಂದು ಅಮೆರಿಕದ ಅಧ್ಯಕ್ಷರು ಟ್ವೀಟ್‌ ಮಾಡಿದ್ದಾರೆ.

‘ಒಬಾಮ ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಇಂತಹ ಕೀಳುಮಟ್ಟದ ಕೆಲಸ ಮಾಡಿದ್ದಾರೆ. ಈ ಪ್ರಕರಣ ಮಾಜಿ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಅವರ ‘ವಾಟರ್‌ ಗೇಟ್‌’ ಹಗರಣದಂತಿದೆ. ಒಬಾಮ ಒಬ್ಬ ಕೆಟ್ಟ ವ್ಯಕ್ತಿ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಟ್ರಂಪ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.