ADVERTISEMENT

ಕಾಬೂಲ್‌ನಲ್ಲಿ ಬಾಂಬ್‌ ದಾಳಿ: 61 ಸಾವು, ಹೊಣೆ ಹೊತ್ತ ಐಎಸ್‌

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 13:52 IST
Last Updated 23 ಜುಲೈ 2016, 13:52 IST
ಕಾಬೂಲ್‌ನಲ್ಲಿ ಬಾಂಬ್‌ ದಾಳಿ: 61 ಸಾವು, ಹೊಣೆ ಹೊತ್ತ ಐಎಸ್‌
ಕಾಬೂಲ್‌ನಲ್ಲಿ ಬಾಂಬ್‌ ದಾಳಿ: 61 ಸಾವು, ಹೊಣೆ ಹೊತ್ತ ಐಎಸ್‌   

ಕಾಬೂಲ್‌(ಎಎಫ್‌ಪಿ, ಐಎಎನ್‌ಎಸ್‌): ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಪ್ರಬಲ ಬಾಂಬ್‌ ಸ್ಫೋಟ ಸಂಭವಿಸಿದ್ದು, 61 ಜನ ಸಾವಿಗೀಡಾಗಿದ್ದಾರೆ. 207 ಮಂದಿ ಗಾಯಗೊಂಡಿದ್ದಾರೆ. ಇಸ್ಲಾಮಿಕ್‌ ಸ್ಟೇಟ್‌(ಐಎಸ್‌) ಸಂಘಟನೆ ದಾಳಿಯ ಹೊಣೆ ಹೊತ್ತಿದೆ.

ಅಲ್ಪಸಂಖ್ಯಾತ ಶಿಯಾ ಸಮುದಾಯದ ಜನರು ಪ್ರತಿಭಟನೆ ನಡೆಸುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 61 ಜನ ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಫ್ಘಾನಿಸ್ತಾನದ ಆರೋಗ್ಯ ಸಚಿವಾಲಯದ ವಕ್ತಾರ ಮಹಮದ್‌ ಇಸ್ಮಾಯಿಲ್‌ ಕೌಷಿ ಹೇಳಿದ್ದಾರೆ.

ಇಸ್ಲಾಮಿಕ್‌ ಸ್ಟೇಟ್‌(ಐಎಸ್‌) ಸಂಘಟನೆಯ ಉಗ್ರರು ಆತ್ಮಹತ್ಯೆ ಬಾಂಬ್‌ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಲ್ಪಸಂಖ್ಯಾತ ಸಮುದಾಯದ ಜನರ ವಸತಿ ಪ್ರದೇಶಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕುರಿತು ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.

ಸ್ಫೋಟದ ತೀವ್ರತೆಗೆ ಮೃತ ದೇಹಗಳು ಹಾಗೂ ದೇಹಗಳ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT