ADVERTISEMENT

ಕಾರ್ಮಿಕನಿಗೆ ಒಲಿದ ಲಾಟರಿ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST

ಲಂಡನ್‌ (ಪಿಟಿಐ): ಇದು ಅದೃಷ್ಟದ ಆಟದಲ್ಲಿ ಕಾರ್ಮಿಕನೊಬ್ಬ ಕುಬೇರನಾದ ಕಥೆ. ಬ್ರಿಟನ್‌ನಲ್ಲಿ ರಸ್ತೆ ಕೆಲಸ ಮಾಡುವ 25 ವರ್ಷದ ಕಾರ್ಮಿಕ ಐದು ಪೌಂಡ್‌  (₹490) ಕೊಟ್ಟು ಖರೀದಿಸಿದ ಸ್ಕ್ರ್ಯಾಚ್‌  ಕಾರ್ಡ್‌ಗೆ ಉಜ್ಜಿದ ನಂತರ ಆತನಿಗೆ ಸಿಕ್ಕ ಬಹುಮಾನದ ಮೊತ್ತ ಬರೋಬ್ಬರಿ ಸುಮಾರು ₹9.8 ಕೋಟಿ.

ಇಷ್ಟು ಐಶ್ವರ್ಯಗಳಿಸಿದ್ದರೂ ಆ ಕಾರ್ಮಿಕನಿಗೆ ವೃತ್ತಿಯ ಮೇಲಿರುವ ಗೌರವ ಕಡಿಮೆ ಆಗಿರಲಿಲ್ಲ. ಬೆಳಿಗ್ಗೆ ಎದ್ದವನೇ ಪುನಃ ರಸ್ತೆ ಕೆಲಸಕ್ಕೆ ಹಾಜರಾಗಿದ್ದ. ಮ್ಯಾಂಚೆಸ್ಟರ್‌ ನಗರದ ನಿವಾಸಿ ಕಾರ್ಲ್‌ ಕ್ರೂಕ್‌ ಎಂಬಾತನೇ ಅದೃಷ್ಟದ ಆಟದಲ್ಲಿ ಕೋಟಿಗಳಿಸಿದ ವ್ಯಕ್ತಿ. 

ಕಳೆದ ಗುರುವಾರ ಸ್ಥಳೀಯ ಅಂಗಡಿಯಲ್ಲಿ ಪಾನೀಯ ಮತ್ತು ಸ್ಕ್ರ್ಯಾಚ್‌ ಕಾರ್ಡ್‌ ತೆಗೆದುಕೊಂಡ ಹೊರಬಂದ ಕ್ರೂಕ್‌ನ ಅದೃಷ್ಟ ಬದಲಾಗಿತ್ತು. ‘ನಾನು ಇಲ್ಲೇಕೆ (ರಸ್ತೆ ಕೆಲಸಕ್ಕೆ)  ಬಂದೆ ಎನ್ನುವ ಚಿಂತೆ ಒಮ್ಮೆ ನನ್ನನ್ನು ಕಾಡಿತು. ಆದರೆ, ನನ್ನ ಕೆಲಸ. ಕೆಲಸ ನೀಡಿದ ಕಂಪೆನಿ ಮತ್ತು ಸಹೋದ್ಯೋಗಿಗಳ ಜತೆಗಿನ ಒಡನಾಟ ನನಗೆ ಸಂತಸ ತಂದಿದೆ’ ಎಂದು ಕ್ರೂಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.