ADVERTISEMENT

ಕಾಶ್ಮೀರ, ಪಾಕಿಸ್ತಾನ, ನೇಪಾಳದಲ್ಲಿ ಲಘು ಭೂಕಂಪ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2015, 15:18 IST
Last Updated 10 ಆಗಸ್ಟ್ 2015, 15:18 IST

ಶ್ರೀನಗರ, ಕಠ್ಮಂಡು, ಇಸ್ಲಾಮಾಬಾದ್, ಸಿಡ್ನಿ(ಪಿಟಿಐ, ಐಎಎಎನ್ ಎಸ್, ಎಎಫ್ ಪಿ): ಭಾರತದ ಕಾಶ್ಮೀರ ಕಣಿವೆ ಸೇರಿದಂತೆ ಪಾಕಿಸ್ತಾನ, ನೇಪಾಳ ಹಾಗೂ ಆಸ್ಟ್ರೇಲಿಯಾದ ಸಿಡ್ನಿ ಸಮೀಪದ ದ್ವೀಪವೊಂದರಲ್ಲಿ ಸೋಮವಾರ ಲಘು ಭೂಕಂಪ ಸಂಭವಿಸಿದೆ.

ಶ್ರೀನಗರದ ಕಣಿವೆ ಪ್ರದೇಶದಲ್ಲಿ ಭೂಕಂಪದ ಅನುಭವವಾಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಕಜಕಿಸ್ತಾನದ ಗಡಿ ಪ್ರದೇಶದಲ್ಲಿ 200 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು. ತೀವ್ರತೆ ರಿಕ್ಟರ್ ಮಾಪಕದಲ್ಲಿ 6.7ರಷ್ಟು ದಾಖಲಾಗಿದೆ.    

ಇಸ್ಲಾಮಾಬಾದ್, ಫೈಸಲಾಬಾದ್, ಮಿನವಾಲಿ, ಪೇಶಾವರ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲು ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.

ನೇಪಾಳದ ಕಠ್ಮಂಡುವಿನಿಂದ 150 ಕಿ.ಮೀ. ದೂರದಲ್ಲಿ ಗೊರಖ್ ಜಿಲ್ಲೆಯಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.9ರಷ್ಟು ತೀವ್ರತೆ ದಾಖಲಾಗಿದೆ.   
 
ಆಸ್ಟ್ರೇಲಿಯಾದ ಸಿಡ್ನಿ ಸಮೀಪದ ಸಾಲಮನ್ ದ್ವೀಪದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.9ರಷ್ಟು ತೀವ್ರತೆ ದಾಖಲಾಗಿದೆ. ಸಮುದ್ರದಲ್ಲಿ ಸುನಾಮಿ ಸಂಭವಿಸಬಹುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.