ADVERTISEMENT

ಕಿರ್ಗಿಸ್ತಾನದಲ್ಲಿ ವಿಮಾನ ಪತನ: 32 ಮಂದಿ ಸಾವು

ಏಜೆನ್ಸೀಸ್
Published 16 ಜನವರಿ 2017, 7:18 IST
Last Updated 16 ಜನವರಿ 2017, 7:18 IST
ಕಿರ್ಗಿಸ್ತಾನದಲ್ಲಿ ವಿಮಾನ ಪತನ: 32 ಮಂದಿ ಸಾವು
ಕಿರ್ಗಿಸ್ತಾನದಲ್ಲಿ ವಿಮಾನ ಪತನ: 32 ಮಂದಿ ಸಾವು   

ಬಿಶ್ಕೇಕ್‌: ಕಿರ್ಗಿಸ್ತಾನದ ಮುಖ್ಯವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಕಾರ್ಗೊ ವಿಮಾನ ಸೋಮವಾರ ದಟ್ಟ ಮಂಜಿನಿಂದಾಗಿ ಜನವಸತಿ ಪ್ರದೇಶದಲ್ಲಿ ಪತನವಾಗಿದ್ದು, ದುರ್ಘಟನೆಯಲ್ಲಿ 32 ಮಂದಿ ಸಾವಿಗೀಡಾಗಿದ್ದಾರೆ.

ಟರ್ಕಿ ಏರ್‌ಲೈನ್‌ನ ಕಾರ್ಗೊ ವಿಮಾನ ಗ್ರಾಮವೊಂದರ ಜನವಸತಿಯ ಮನೆಗಳ ಬಳಿ ಬೆಳಿಗ್ಗೆ 7.30ಕ್ಕೆ ಪತನವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಕಾರ್ಗೊ ವಿಮಾನ ಇಸ್ತಾಂಬುಲ್‌ನಿಂದ ಕಿರ್ಗಿಸ್ತಾನದ ಮೂಲಕ ಹಾಂಕಾಂಗ್‌ಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಕಿರ್ಗಿಸ್ತಾನದ ಮುಖ್ಯ ವಿಮಾನನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ ದಟ್ಟ ಮಂಜಿನಿಂದಾಗಿ ಅಪಘಾತಕ್ಕೀಡಾಗಿದೆ. ನಾಲ್ವರು ವಿಮಾನ ಚಾಲಕರು ಸೇರಿದಂತೆ 32 ಮಂದಿ ಸಾವಿಗೀಡಾಗಿದ್ದಾರೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.