ADVERTISEMENT

ಕಿವಿ ರಚನೆಗೆ 3ಡಿ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ವಾಷಿಂಗ್ಟನ್‌ (ಪಿಟಿಐ): ಕಿವಿ ಇಲ್ಲದ, ಕಿವಿ ಸರಿಯಾಗಿ ಬೆಳವಣಿಗೆಯಾಗದ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರು ಕಿವಿಯ ಆಕೃತಿ ಮಾಡಲು ಇನ್ನು ಚಿಂತಿಸುವ ಅಗತ್ಯವಿಲ್ಲ!

ಹೌದು, 3ಡಿ ತಂತ್ರಜ್ಞಾನದ ಸಹಾಯದಿಂದ ಕಡಿಮೆ ವೆಚ್ಚದಲ್ಲಿ ಸುಲಭವಾಗಿ  ಕಿವಿಯ ಆಕೃತಿ ಮಾಡಬಹುದಾದ ಮಾದರಿಯೊಂದನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.

‘ಇಲ್ಲಿಯವರೆಗೆ ಮಕ್ಕಳ ಕಿವಿಯ ರಚನೆ ಮಾಡುವ ವೈದ್ಯರು ತರಕಾರಿ, ಸತ್ತ ಮನುಷ್ಯ, ಹಂದಿಯ ಪಕ್ಕೆಲುಬುಗಳಲ್ಲಿ ಅಭ್ಯಾಸ ಮಾಡುತ್ತಿದ್ದರು. ಆದರೆ ಅದು ಅಷ್ಟು ಸೂಕ್ತ ಮಾರ್ಗವಾಗಿರಲಿಲ್ಲ’ ಎನ್ನುವುದು ಸಂಶೋಧಕರ ಮಾತು.

‘ಮಕ್ಕಳ ಎಲುಬಿನ ಗಾತ್ರ ಮತ್ತು ಸಾಂದ್ರತೆ ಭಿನ್ನವಾಗಿರುವುದರಿಂದ ಆ ವಿಧಾನ ಸೂಕ್ತವಾಗಿರಲಿಲ್ಲ. ಹಾಗಾಗಿ ಮಕ್ಕಳ ಕಿವಿಯ ಆಕೃತಿ ರೂಪಿಸಲು ಸುಲಭವಾಗುವಂತಹ ಮಾದರಿ ರೂಪಿಸಲಾಗಿದೆ’ ಎಂದು ಅಧ್ಯಯನದ ಪ್ರಮುಖ ಸಂಶೋಧಕ ಕೆಥಲೀನ್‌ ಸೈ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.