ADVERTISEMENT

ಕೈಕುಲುಕದ ಕಾರಣ ಪಾಸ್‌ಪೋರ್ಟ್‌ ನಕಾರ

ಏಜೆನ್ಸೀಸ್
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST

ಪ್ಯಾರಿಸ್‌: ಫ್ರಾನ್ಸ್‌ ದೇಶದ ಪೌರತ್ವ ನೀಡುವ ಕಾರ್ಯಕ್ರಮದ ದಿನ ಅಧಿಕಾರಿಗಳಿಗೆ ಕೈಕುಲುಕಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಮಹಿಳೆಗೆ ಪಾಸ್‌ಪೋರ್ಟ್‌ ನೀಡಲು ನಿರಾಕರಿಸಿರುವ ಕ್ರಮ ಸರಿಯಾಗಿದೆ ಎಂದು ಇಲ್ಲಿಯ ಉನ್ನತ ಕೋರ್ಟ್‌ ಹೇಳಿದೆ.

ಫ್ರಾನ್ಸ್‌ ಪ್ರಜೆಯನ್ನು ವಿವಾಹವಾಗಿದ್ದ ಅಲ್ಜೇರಿಯನ್‌ ಮುಸ್ಲಿಂ ಮಹಿಳೆಯೊಬ್ಬರು 2016ರಲ್ಲಿ ಪಾಸ್‌ಪೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದೆ.

ಪುರುಷರ ಕೈ ಕುಲುಕಲು ತಮ್ಮ ‘ಧಾರ್ಮಿಕ ನಂಬಿಕೆ’ ಒಪ್ಪಿಗೆ ನೀಡುವುದಿಲ್ಲ. ಅದನ್ನು ನಾನು ಪಾಲಿಸಿದ್ದೇನೆ ಎಂದು ಮಹಿಳೆ ವಾದಿಸಿದ್ದರು. ಆದರೆ ಫ್ರಾನ್ಸ್‌ ಸರ್ಕಾರ ಅವರ ವಿರುದ್ಧ ಪ್ರತಿವಾದಿಸಿತ್ತು.

ADVERTISEMENT

‘ನಮ್ಮ ದೇಶದ ಪೌರತ್ವ ಪಡೆಯುವ ವೇಳೆ ಕೈಕುಲುಕುವುದು ಕಡ್ಡಾಯ. ಆದರೆ ಮಹಿಳೆಯು ಇಲ್ಲಿಯ ಪದ್ಧತಿಯನ್ನು ಮೈಗೂಡಿಸಿಕೊಂಡಿಲ್ಲ. ಆದ್ದರಿಂದ ಅವರಿಗೆ ಪಾಸ್‌ಪೋರ್ಟ್‌ ನೀಡಲಾಗದು ಎಂದಿತ್ತು. ಈ ವಾದವನ್ನು ಕೋರ್ಟ್‌ ಮಾನ್ಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.