ADVERTISEMENT

ಕೋಟ್ಯಧಿಪತಿ ಪಟ್ಟಿಗೆ ಮಲಾಲ!

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಲಂಡನ್‌ (ಪಿಟಿಐ): ಆತ್ಮಕತೆಯ ಕೃತಿ ಹಾಗೂ ಭಾಷಣಗಳಿಂದಾಗಿ ಬರುವ ಅಧಿಕ ಆದಾಯದಿಂದಾಗಿ ನೊಬೆಲ್‌ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್‌ ಝೈ ಹಾಗೂ ಅವರ ಕುಟುಂಬ  ಕೋಟ್ಯಧಿಪತಿ  ಪಟ್ಟಿಗೆ  ಸೇರಿದೆ.

ಪಾಕಿಸ್ತಾನದ ಸ್ವತ್‌ ಕಣಿವೆಯಲ್ಲಿ  ತಾಲಿಬಾನ್‌ ಆಡಳಿತದಲ್ಲಿ ಮಲಾಲಳ ಅನುಭವಗಳು ಹಾಗೂ ಆಕೆಯ ವಿಶ್ವದಾದ್ಯಂತ ಮಾಡಿದ ಭಾಷಣಗಳಿಂದ ಆಕೆಯ ಆದಾಯ ಗಳಿಕೆ ಹೆಚ್ಚಾಗಿದೆ.

18 ವರ್ಷದ ಮಲಾಲ ತಾಲಿಬಾನ್‌ ಉಗ್ರರಿಂದ ಗುಂಡೇಟು ತಿಂದು ಬದುಕುಳಿದು, ಸ್ವತ್‌ ಕಣಿವೆಯಲ್ಲಿ ಉಗ್ರರ ವಿರುದ್ಧವೇ ತಿರುಗಿ ಬಿದ್ದ ಆಕೆಯ ಆತ್ಮಕತೆ  ‘ಐ ಆ್ಯಮ್‌ ಮಲಾಲ’ ಕೃತಿ 2015ರ ಆಗಸ್ಟ್‌ ವೇಳೆಗೆ  ₹19 ಕೋಟಿ ಗಳಿಸಿದೆ.

ಮಲಾಲ ಜೀವನದ ಅನುಭವ ಕತೆಯ ಹಕ್ಕುಗಳನ್ನು ಕಾಯ್ದಿರಿಸಿ ‘ಶಲಾರ್‌ಝೈ ಲಿಮಿಟೆಡ್’ ಎಂಬ ಕಂಪೆನಿ ಆರಂಭಿಸಿದ್ದು, ತಂದೆ ಜಿಯಾವುದ್ದೀನ್‌ ಯೂಸುಫ್‌ಝೈ ಹಾಗೂ ತಾಯಿ ತೂರ್‌ ಪೆಕೈ ಈ ಕಂಪೆನಿ ಷೇರುದಾರರು ಎಂದು ‘ದಿ ಟೈಮ್ಸ್‌’ ವರದಿ ಮಾಡಿದೆ. ಸದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನೆಲೆಸಿರುವ ಮಲಾಲ ಎಡ್ಜ್‌ಬಾಸ್ಟನ್‌  ಹೈಸ್ಕೂಲಿನಲ್ಲಿ ಓದುತ್ತಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.