ADVERTISEMENT

ಕ್ಸಿನ್‌ಜಿಯಾಂಗ್‌ ನಲ್ಲಿ ಶಿಶುಗಳಿಗೆ ಇಸ್ಲಾಮಿಕ್ ಹೆಸರುಗಳನ್ನಿಡುವುದನ್ನು ನಿಷೇಧಿಸಿದ ಚೀನಾ

ಏಜೆನ್ಸೀಸ್
Published 25 ಏಪ್ರಿಲ್ 2017, 11:06 IST
Last Updated 25 ಏಪ್ರಿಲ್ 2017, 11:06 IST
ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಕಶ್‌ಘರ್ ಮಾರುಕಟ್ಟೆಯಲ್ಲಿ ಮಗುವಿನ ಜತೆ ಉಯ್ಘರ್ ಮುಸ್ಲಿಂ ಮಹಿಳೆಯರು (ಸಾಂದರ್ಭಿಕ ಚಿತ್ರ)
ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಕಶ್‌ಘರ್ ಮಾರುಕಟ್ಟೆಯಲ್ಲಿ ಮಗುವಿನ ಜತೆ ಉಯ್ಘರ್ ಮುಸ್ಲಿಂ ಮಹಿಳೆಯರು (ಸಾಂದರ್ಭಿಕ ಚಿತ್ರ)   

ಬೀಜಿಂಗ್: ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಶಿಶುಗಳಿಗೆ ಇಸ್ಲಾಮಿಕ್ ಹೆಸರುಗಳನ್ನಿಡುವುದಕ್ಕೆ ಚೀನಾ ಸರ್ಕಾರ ನಿಷೇಧ ಹೇರಿದೆ. ಇಸ್ಲಾಮಿಕ್ ಉಗ್ರವಾದವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚೀನಾ ಹೇಳಿದೆ.

ಇಮಾಮ್, ಹಾಜಿ, ಇಸ್ಲಾಂ, ಖುರಾನ್, ಸದ್ದಾಂ ಮತ್ತಿತರ ಹೆಸರುಗಳನ್ನಿಡುವುದಕ್ಕೆ ‘ಅಲ್ಪಸಂಖ್ಯಾತರ ನಾಮಕರಣ ನಿಯಮ’ಗಳಲ್ಲಿ ನಿಷೇಧ ಹೇರಲಾಗಿದೆ ಎಂದು ರೇಡಿಯೊ ಫ್ರೀ ಏಷ್ಯಾ(ಆರ್‌ಎಫ್‌ಎ) ವರದಿ ಮಾಡಿದೆ.

ಅತಿಯಾದ ಧಾರ್ಮಿಕತೆಯಿಂದ ಕೂಡಿದ ಹೆಸರನ್ನಿಟ್ಟ ಮಗು ಶಿಕ್ಷಣ, ಆರೋಗ್ಯ ಮತ್ತಿತರ ಸರ್ಕಾರಿ ಯೋಜನೆಗಳಿಂದ ವಂಚಿತವಾಗಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಆರ್‌ಎಫ್‌ಎ ವರದಿ ಮಾಡಿದೆ.

ADVERTISEMENT

ಈ ಮಧ್ಯೆ, ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡದಂತೆ ಉಯ್ಘರ್ ಮುಸ್ಲಿಮರಿಗೆ ಸೂಚಿಸಲಾಗಿದೆ.

ಅಸಹಜವಾಗಿ ಗಡ್ಡ ಬಿಡುವುದು, ಬುರ್ಖಾ ತೊಟ್ಟು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುವುದನ್ನು ಇತ್ತೀಚೆಗೆ ಚೀನಾ ನಿಷೇಧಿಸಿತ್ತು. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.