ADVERTISEMENT

ಗಂಡನ ತಂದೆಯ ವೀರ್ಯದಿಂದ ಕೃತಕ ಗರ್ಭಧಾರಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ಟೋಕಿಯೊ (ಪಿಟಿಐ):  ಕೇಂದ್ರ ಜಪಾನ್‌ನ ಕೃತಕ ಗರ್ಭ ಧಾರಣೆ ನೆರವು ಕೇಂದ್ರವೊಂದು ವಿವಾಹಿತ ಮಹಿಳೆಯರ ಹತ್ತಿರದ ಸಂಬಂಧಿಕರಿಂದಲೇ ವೀರ್ಯ ಸಂಗ್ರಹಿಸಿ ಗರ್ಭ ಧರಿಸಲು ನೆರವಾಗುತ್ತಿದೆ. ಇದಕ್ಕಾಗಿ ಮಹಿಳೆಯ ಗಂಡನ ತಂದೆಯ ವೀರ್ಯವನ್ನು ಕೂಡ  ಬಳಸಲಾಗುತ್ತಿದೆ. ಈ ವಿಧಾನದಿಂದ 1996ರಿಂದ 2013ರ ಅವಧಿಯಲ್ಲಿ 118 ಮಕ್ಕಳು ಜನಿಸಿದ್ದಾರೆ.

ನಗನೊದಲ್ಲಿರುವ ಸುವಾ ಗರ್ಭಧಾರಣೆ ಕ್ಲಿನಿಕ್‌ ಈವರೆಗೆ 110 ಮಹಿಳೆಯರಿಗೆ ಅವರ ಗಂಡಂದಿರ ತಂದೆಯ ವೀರ್ಯವನ್ನು ಬಳಸಿ ಕೃತಕ ಗರ್ಭಧಾರಣೆಗೆ ನೆರವು ನೀಡಿದೆ. ಅವರಲ್ಲಿ 95 ಮಹಿಳೆಯರು ಗರ್ಭ ಧರಿಸಿದರೆ 79 ಮಂದಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಜಪಾನ್‌ನ ಕ್ಯೊಡೊ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗಂಡಂದಿರಲ್ಲಿ ಫಲವತ್ತತೆ ಸಮಸ್ಯೆ ಇದ್ದ 146 ಮಹಿಳೆಯರಿಗೆ ಹತ್ತಿರದ ಸಂಬಂಧಿಕರ ವೀರ್ಯದ ಮೂಲಕ ಗರ್ಭ ಧರಿಸಲು ನೆರವು ನೀಡಲಾಗಿದೆ. ಅವರಲ್ಲಿ 28 ಮಹಿಳೆಯರು ಗಂಡಂದಿರ ಸಹೋದರರು ಮತ್ತು ಎಂಟು ಮಹಿಳೆಯರು ಹತ್ತಿರದ ಸಂಬಂಧಿಕರ ವೀರ್ಯದಿಂದ ಗರ್ಭ ಧರಿಸಿದ್ದಾರೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.