ಟೋಕಿಯೊ (ಎಪಿ): ಉಗ್ರವಾದಿ ಮಹಿಳೆಯ ಬಿಡುಗಡೆಗೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ವಿಧಿಸಿದ್ದ ಗಡುವು ಮುಗಿದಿದ್ದರೂ ಅವರಿಂದ ಯಾವುದೇ ಸಂದೇಶ ಬಂದಿಲ್ಲ. ಇದರಿಂದ ಒತ್ತೆಯಾಳುಗಳಾಗಿರುವ ಹವ್ಯಾಸಿ ಪತ್ರಕರ್ತ ಜಪಾನಿ ಕೆಂಜಿ ಗೊಟೊ ಮತ್ತು ಪೈಲಟ್ ಕಸಸ್ಬೆಹ್ ಅವರ ಕುಟುಂಬಗಳು ಆತಂಕದಲ್ಲಿವೆ.
ಜೋರ್ಡಾನ್ನಲ್ಲಿ ಬಂಧನದಲ್ಲಿರುವ ಇರಾಕ್ ಮೂಲದ ಉಗ್ರಗಾಮಿ ಸಾಜಿದಾ ಅಲ್ ರಿಶಾವಿ ಬಿಡುಗಡೆಗೆ ಐಎಸ್ ಉಗ್ರರು ಗುರುವಾರದವರೆಗೂ ಗಡುವು ನೀಡಿದ್ದರು. ಪೈಲಟ್ ಸುರಕ್ಷಿತವಾಗಿದ್ದಾರೆ ಎಂಬುದಕ್ಕೆ ಉಗ್ರರು ಇನ್ನೂ ಪುರಾವೆ ಒದಗಿಸಿಲ್ಲ ಎಂದು ಜೋರ್ಡಾನ್ ಸರ್ಕಾರ ಹೇಳಿದೆ.
ಒತ್ತೆಯಾಳು ಕೆಂಜಿ ಗೊಟೊ ಅವರ ಬಿಡುಗಡೆಗೆ ಜೋರ್ಡಾನ್ ಸಹಕಾರ ನೀಡಲಿದೆ ಎಂಬ ವಿಶ್ವಾಸವನ್ನು ಸರ್ಕಾರದ ವಕ್ತಾರ ಯೊಶಿಹಿದೆ ಸುಗಾ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಗುರುವಾರ ರಾತ್ರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಗೊಟೊ ಅವರ ಪತ್ನಿ ರಿಂಕೊ ಜೊಗೊ, ಪತಿಯ ಬಿಡುಗಡೆ ಬಗ್ಗೆ ಆತಂಕದಲ್ಲಿರುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.