ADVERTISEMENT

ಗೊರಿಲ್ಲಾ ಬದಲು ಕಪ್ಪು ದಂಪತಿ

ಚಿತ್ರದಲ್ಲಿ ಅವಾಂತರ: ಭಾರಿ ಟೀಕೆ, ಕ್ಷಮೆ ಯಾಚಿಸಿದ ಗೂಗಲ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ವಾಷಿಂಗ್ಟನ್‌ (ಪಿಟಿಐ): ತನ್ನ ಹೊಸ ಫೋಟೊ ಆ್ಯಪ್‌ನಲ್ಲಿ ಚಿತ್ರ ಗುರುತಿಸುವ ತಂತ್ರಾಂಶವನ್ನು  ಗೂಗಲ್‌ ಅಳವಡಿಸಿದೆ. ಇದು ಸೃಷ್ಟಿಸಿದ ಅವಾಂತರ ವಿವಾದಕ್ಕೆ ಕಾರಣವಾಗಿದೆ. ಈ ತಂತ್ರಾಂಶ ಕಪ್ಪು ವರ್ಣೀಯ ದಂಪತಿಯನ್ನು ಗೊರಿಲ್ಲಾ  ಎಂದು ತಪ್ಪಾಗಿ ಪ್ರಕಟಿಸಿದ್ದು ಗೂಗಲ್‌ ಅದಕ್ಕೆ ಕ್ಷಮೆಯಾಚಿಸಿದೆ. ಇಂತಹ ತಪ್ಪನ್ನು ಸರಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ಗೂಗಲ್‌ ಮಾಡಿದ ತಪ್ಪಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಯಿತು.  ವರ್ಣಭೇದ ಮನಸ್ಥಿತಿಯನ್ನು ಬಿಂಬಿಸುವ ಗೂಗಲ್‌ನ ಈ ಪ್ರಮಾದವನ್ನು ನ್ಯೂಯಾರ್ಕ್‌ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಗುರುತಿಸಿದ್ದರು.ತಪ್ಪಿನ ಗಾಂಭೀರ್ಯವನ್ನು ಅರಿತ ಗೂಗಲ್‌, ಕೂಡಲೇ ಕ್ಷಮೆಯಾಚಿಸಿತು.

‘ನಾವು ಕ್ಷಮೆಯಾಚಿಸಿದ್ದೇವೆ. ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರಿಕೆ ವಹಿಸುತ್ತೇವೆ’ ಎಂದು ಗೂಗಲ್‌ ವಕ್ತಾರರು ‘ಬಿಬಿಸಿ’ಗೆ ತಿಳಿಸಿದ್ದಾರೆ. ಗೂಗಲ್‌ನಲ್ಲಿ ಚಿತ್ರ ಮತ್ತು ಶೀರ್ಷಿಕೆ ಬದಲಾಗುತ್ತಿರುವುದು ಇದು  ಮೊದಲೇನಲ್ಲ. ಮೇಯಲ್ಲಿ ಕುದುರೆಗಳ ಚಿತ್ರ ಹಾಕಿ ನಾಯಿಗಳು ಎಂದು ಶೀರ್ಷಿಕೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.