ADVERTISEMENT

ಚೀನಾ: ಮದುವೆಗೆ ಸರ್ಕಾರದಿಂದಲೇ ಪೌರೋಹಿತ್ಯ!

ಪಿಟಿಐ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಚೀನಾ: ಮದುವೆಗೆ ಸರ್ಕಾರದಿಂದಲೇ ಪೌರೋಹಿತ್ಯ!
ಚೀನಾ: ಮದುವೆಗೆ ಸರ್ಕಾರದಿಂದಲೇ ಪೌರೋಹಿತ್ಯ!   

ಬೀಜಿಂಗ್‌: ಮದುವೆ ವಯಸ್ಸಿಗೆ ಬಂದಿದ್ದರೂ, ಚೀನಾದಲ್ಲಿ 10 ಕೋಟಿಗೂ ಅಧಿಕ ಯುವಸಮುದಾಯದವರು ಒಂಟಿ ಜೀವನ ನಡೆಸುತ್ತಿದ್ದಾರೆ. ಇಂತಹವರನ್ನು ಮದುವೆಯತ್ತ ಸೆಳೆಯಲು ಸರ್ಕಾರವೇ ಇದೀಗ ಪೌರೋಹಿತ್ಯ ವಹಿಸಿಕೊಂಡಿದೆ.

ಯುವ ಸಮುದಾಯವು, ಸೂಕ್ತ ಸಂಗಾತಿಯನ್ನು ಆರಿಸಿಕೊಳ್ಳಲು ಸರ್ಕಾರವೇ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆಡಳಿತರೂಢಾ ಚೀನಾದ ಕಮ್ಯುನಿಷ್ಟ್‌ ಪಕ್ಷದ ಯುವ ಘಟಕ ಕಮ್ಯುನಿಸ್ಟ್‌ ಯೂತ್‌ ಲೀಗ್‌(ಸಿವೈಎಲ್) ಈ ಸಂಬಂಧ ಕೆಲವೊಂದು ನಿಯಾಮವಳಿಗಳನ್ನು ಪ್ರಕಟಿಸಿದೆ.

ಸರ್ಕಾರದ ಅಧಿಕೃತ ಅಂಕಿಅಂಶ ಪ್ರಕಾರ, 10 ಕೋಟಿಗೂ ಅಧಿಕ ಯುವ ಸಮುದಾಯವು ಮದುವೆ ವಯಸ್ಸು ಕಳೆದಿದ್ದರೂ, ಒಂಟಿಯಾಗಿದ್ದಾರೆ. 2010ರಲ್ಲಿ ನಡೆದ 6ನೇ ಜನಗಣತಿ ಪ್ರಕಾರ, ಶೇಕಡಾ 2.47 ಯುವತಿಯರೂ 30 ವರ್ಷ ಕಳೆದಿದ್ದರೂ ಏಕಾಂಗಿಯಾಗಿದ್ದಾರೆ. ಯುವ ಸಮುದಾಯವು ಸೂಕ್ತ ಸಂಗಾತಿ ಆಯ್ಕೆ ಮೂಲಕ ಸಾಮಾಜಿಕ ಸಾಮರಸ್ಯ ಹಾಗೂ ಸ್ಥಿರತೆ ಕಾಪಾಡಲು ಸಹಾಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ADVERTISEMENT

ಉದ್ಯೋಗದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ಹಾಗೂ ತೀವ್ರ ಸ್ಪರ್ಧೆಯಿಂದ ಯುವಸಮುದಾಯವು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಮನಗಂಡು ಚೀನಾದ ಝೆಜಿಯಾಂಗ್‌ ಪ್ರಾಂತ್ಯವು ಕಳೆದ ಜೂನ್‌ನಲ್ಲಿ ಇದೇ ರೀತಿಯ ಕಾರ್ಯಕ್ರಮ ನಡೆಸಿತ್ತು. 5 ಸಾವಿರಕ್ಕೂ ಅಧಿಕ ಮಂದಿ ಇಲ್ಲಿ ಭಾಗವಹಿಸಿದ್ದರು.

‘ಸರ್ಕಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಾರ್ಮಿಕ ಯೂನಿಯನ್‌ ಹಾಗೂ  ಮಹಿಳಾ ಸಂಘಟನೆಗಳು ಕೈಜೋಡಿಸಿವೆ‘ ಎಂದು ಸರ್ಕಾರಿಸ್ವಾಮ್ಯದ ಗ್ಲೋಬಲ್‌ಟೈಮ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.