ADVERTISEMENT

ಚೀನಾ: 3ನೇ ಪೀಳಿಗೆ ಕ್ಷಿಪಣಿ ಅಭಿವೃದ್ಧಿ

ಪಿಟಿಐ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST

ಬೀಜಿಂಗ್‌ (ಪಿಟಿಐ): ಭೂಮಿಯಿಂದ ಆಕಾಶಕ್ಕೆ ಚಿಮ್ಮುವ  ಮೂರನೇ ಪೀಳಿಗೆಯ ಕ್ಷಿಪಣಿಯನ್ನು ಚೀನಾ ಅಭಿವೃದ್ಧಿಪಡಿಸಿದೆ. ಈ ಮೂಲಕ ಯಾವುದೇ ರೀತಿಯ ದಾಳಿ ಎದುರಿಸಲು ಸನ್ನದ್ಧ ಎನ್ನುವ ಸಂದೇಶವನ್ನು ಚೀನಾ ನೀಡಿದೆ ಎಂದು ವಿಶ್ಲೇಷಿಸಲಾಗಿದೆ.

ಹೊಸ ಕ್ಷಿಪಣಿಗಳು ಚೀನಾ ಸೇನೆಯ ದಾಳಿಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ‘ಟರ್ಮಿನಲ್‌ ಹೈ ಅಲ್ಟಿಟ್ಯೂಡ್‌ ಏರಿಯಾ ಡಿಫೆನ್ಸ್‌‘(ಥಾಡ್) ಪ್ರತಿಬಂಧಕ ಕ್ಷಿಪಣಿಗಳನ್ನು ದಕ್ಷಿಣ ಕೊರಿಯಾ ನಿಯೋಜಿಸಿರುವುದಕ್ಕೆ ಪ್ರತಿಯಾಗಿ ಚೀನಾ ಈ ಕ್ರಮಕೈಗೊಂಡಿದೆ.

‘ಥಾಡ್‌’ ಪ್ರತಿಬಂಧಕ ಕ್ಷಿಪಣಿಗಳನ್ನು  ದಕ್ಷಿಣ ಕೊರಿಯಾ ನಿಯೋಜಿಸಿರುವುದನ್ನು ವಿರೋಧಿಸಿ  ಚೀನಾ ಹಲವು ಬಾರಿ ಪ್ರತಿಭಟನೆ ವ್ಯಕ್ತಪಡಿಸಿತ್ತು. ದಕ್ಷಿಣ ಕೊರಿಯಾದ ನಿರ್ಧಾರದಿಂದ ದೇಶದ ಭದ್ರತೆಗೆ ಧಕ್ಕೆಯಾಗಲಿದೆ ಎಂದು ಚೀನಾ ಆತಂಕ ವ್ಯಕ್ತಪಡಿಸಿತ್ತು.

ಆದರೆ, ಉತ್ತರ ಕೊರಿಯಾದ ಅಣ್ವಸ್ತ್ರ ದಾಳಿ ಎದುರಿಸಲು ‘ಥಾಡ್‌’ ಕ್ಷಿಪಣಿಗಳನ್ನು ನಿಯೋಜಿಸಲಾಗಿದೆ ಎಂದು ಸಮರ್ಥನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.