ADVERTISEMENT

ಜನಾಂಗೀಯ ನಿಂದನೆ,ಹಲ್ಲೆ ತನಿಖೆಗೆ ನ್ಯಾಯಾಲಯ ಸಮ್ಮತಿ

ಪಿಟಿಐ
Published 18 ಮಾರ್ಚ್ 2017, 19:30 IST
Last Updated 18 ಮಾರ್ಚ್ 2017, 19:30 IST

ವಾಷಿಂಗ್ಟನ್‌: ಭಾರತೀಯ ಮೂಲದ ವ್ಯಕ್ತಿಯನ್ನು ಮುಸ್ಲಿಂ ಎಂದು ತಪ್ಪಾಗಿ ಗ್ರಹಿಸಿ  ಹಲ್ಲೆ ನಡೆಸಿ ಜನಾಂಗೀಯ ನಿಂದನೆ ಮಾಡಿದ ಅಮೆರಿಕದ ವ್ಯಕ್ತಿ ವಿರುದ್ಧ ಆರೋಪ ಪಟ್ಟಿ ದಾಖಲಾಗಿದೆ.

ಪೆನ್ಸಿಲ್ವೇನಿಯಾದ ಜೆಫ್ರೆ ಅಲ್ಲೆ ಬರ್ಗೆಸ್‌ ಹಲ್ಲೆ ನಡೆಸಿದ್ದ ವ್ಯಕ್ತಿ. ‘ನನ್ನ ರಾಷ್ಟ್ರೀಯತೆ, ದೇಹದ ಬಣ್ಣವನ್ನು ಗಮನಿಸಿ ಉದ್ದೇಶಪೂರ್ವಕವಾಗಿ ಕಳೆದ ನ.22 ರಂದು ಹಲ್ಲೆ ನಡೆಸಿದ್ದ’ ಎಂದು ಭಾರತದ ಅಂಕುರ್‌ ಮೆಹ್ತಾ ದೂರು ನೀಡಿದ್ದರು.

ಪಿಟ್ಸ್‌ಬರ್ಗ್‌ನ ಸೌತ್‌ಹಿಲ್ಸ್ ಗ್ರಾಮದಲ್ಲಿರುವ ರೆಬ್‌ ರಾಬಿನ್‌ ರೆಸ್ಟೋರೆಂಟ್‌ನಲ್ಲಿ ಈ ಕೃತ್ಯವೆಸಗಲಾಗಿತ್ತು. ಬರ್ಗೆಸ್‌ ವಿರುದ್ಧ ಜನಾಂಗೀಯ ದ್ವೇಷದಾಳಿ ನಡೆಸಿದ ಆರೋಪ ಹೊರಿಸಲು ಫೆಡರಲ್‌ ನ್ಯಾಯಾಲಯ ಒಪ್ಪಿದೆ. ಬರ್ಗೆಸ್‌ ವಿರುದ್ಧ ಆರೋಪ ಸಾಬೀತಾದರೆ 10 ವರ್ಷ ಜೈಲುಶಿಕ್ಷೆ, ₹1.63 ಕೋಟಿ  ದಂಡ ತೆರಬೇಕಾಗುತ್ತದೆ.

ADVERTISEMENT

ಕಳೆದ ಫೆ.22ರಂದು ಭಾರತದ ಶ್ರೀನಿವಾಸ್‌ ಕೂಚಿಭೊಟ್ಲ ಅವರನ್ನು ಕನ್ಸಾಸ್‌ನಲ್ಲಿ ಹತ್ಯೆ ಮಾಡಲಾಗಿತ್ತು.  ಮಾರ್ಚ್‌ 3ರಂದು ಸಿಖ್‌ ಅಮೆರಿಕನ್‌ ವ್ಯಕ್ತಿ ಮೇಲೂ ವಾಷಿಂಗ್ಟನ್‌ನ ಕೆಂಟ್‌ನಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.