ADVERTISEMENT

ಜೋರ್ಡನ್‌: 15 ಮಂದಿಗೆ ಗಲ್ಲು

ಏಜೆನ್ಸೀಸ್
Published 4 ಮಾರ್ಚ್ 2017, 19:56 IST
Last Updated 4 ಮಾರ್ಚ್ 2017, 19:56 IST

ಅಮ್ಮಾನ್‌: ವಿವಿಧ ಅಪರಾಧ ಕೃತ್ಯಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 15 ಮಂದಿಯನ್ನು ಜೋರ್ಡನ್‌ನ ಅಮ್ಮಾನ್‌ನಲ್ಲಿ ಶನಿವಾರ ಬೆಳಿಗ್ಗೆ ನೇಣುಗಂಬಕ್ಕೇರಿಸಲಾಗಿದೆ.

ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ್ದ 10 ಮಂದಿ ಹಾಗೂ ಅತ್ಯಾಚಾರ ಒಳಗೊಂಡಂತೆ ಘೋರ ಅಪರಾಧ ಎಸಗಿದ್ದ ಐವರು ಇದರಲ್ಲಿ ಸೇರಿದ್ದಾರೆ ಎಂದು ಮಾಹಿತಿ ಇಲಾಖೆ ಸಚಿವ ಮೊಹಮ್ಮದ್‌ ಅಲ್‌ ಮೊಮಾನಿ ಅವರು ತಿಳಿಸಿದ್ದಾರೆ.

ಗಲ್ಲು ಶಿಕ್ಷೆಗೆ ಗುರಿಯಾದ ಎಲ್ಲರೂ ಜೋರ್ಡನ್‌ ದೇಶದ ಪ್ರಜೆಗಳಾಗಿದ್ದು,  ದಕ್ಷಿಣ ಅಮ್ಮಾನ್‌ನ ಸೌಗಾ ಕಾರಾಗೃಹದಲ್ಲಿ ಶಿಕ್ಷೆ ಜಾರಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.