ADVERTISEMENT

ಝೈಕಾ ವೈರಸ್‌ನಿಂದ ದೃಷ್ಟಿ ದೋಷ!

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST
ಝೈಕಾ ವೈರಸ್‌ನಿಂದ ದೃಷ್ಟಿ ದೋಷ!
ಝೈಕಾ ವೈರಸ್‌ನಿಂದ ದೃಷ್ಟಿ ದೋಷ!   

ವಾಷಿಂಗ್ಟನ್‌ (ಪಿಟಿಐ): 2015ರಲ್ಲಿ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡ ಝೈಕಾ ವೈರಸ್‌ ಕೇವಲ ನವಜಾತ ಶಿಶುಗಳ ಮಿದುಳನ್ನು ಸಂಕುಚಿತಗೊಳಿಸುವುದಲ್ಲದೆ ಮಕ್ಕಳಲ್ಲಿ ದೃಷ್ಟಿ ದೋಷವನ್ನು ಉಂಟುಮಾಡುತ್ತದೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.

ಬ್ರೆಜಿಲ್‌ ಅತಿ ಹೆಚ್ಚು ತೊಂದರೆಗೆ ಒಳಗಾಗಿದ್ದು ಅಲ್ಲಿ ಜನವರಿ 2016ರವರೆಗೆ ಮಿದುಳು ಬೆಳವಣಿಗೆ ಕುಂಠಿತವಾಗಿರುವ 3174 ಮಕ್ಕಳು ಜನಿಸಿದ್ದಾರೆ ಎಂದು ಬ್ರೆಜಿಲ್‌ ಆರೋಗ್ಯ ಸಚಿವಾಲಯ ವರದಿ ಬಹಿರಂಗಪಡಿಸಿದೆ.

ಸಂಶೋಧಕರ ಪ್ರಕಾರ, ಪರೀಕ್ಷೆಗೆ ಒಳಪಟ್ಟಿದ್ದ ಝೈಕಾ ಸೋಂಕು ತಗುಲಿದ ಸಂಕುಚಿತ ತಲೆಯುಳ್ಳ 29 ಮಕ್ಕಳಲ್ಲಿ 10 ಶಿಶುಗಳಲ್ಲಿ ಕೇವಲ ಕಣ್ಣಿನ ದೋಷ ಕಂಡುಬಂದರೆ 7 ಮಕ್ಕಳಲ್ಲಿ ಎರಡೂ ರೀತಿಯ ವೈಫಲ್ಯ ಇರುವುದು ಅಧ್ಯಯನದಿಂದ ದೃಢಪಟ್ಟಿದೆ.

ಈ ಮಧ್ಯೆ ಚೀನಾದಲ್ಲಿ ಮೊದಲ ಪ್ರಕರಣ ವರದಿಯಾಗಿದೆ. ಇತ್ತೀಚೆಗೆ ವೆನುಜುವೆಲದಿಂದ ಚೀನಾಗೆ ಬಂದ ವ್ಯಕ್ತಿಯಲ್ಲಿ ಝೈಕಾ ವೈರಸ್‌ ಕಂಡುಬಂದಿದ್ದು ಇಲ್ಲಿ ಸೋಂಕು ತಗುಲಿರುವ ಮೊದಲ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.