ADVERTISEMENT

‘ಟೈಟಾನಿಕ್‌’ ಲಾಕರ್‌ ಕೀಲಿಕೈ ಹರಾಜು

ಪಿಟಿಐ
Published 23 ಅಕ್ಟೋಬರ್ 2016, 19:30 IST
Last Updated 23 ಅಕ್ಟೋಬರ್ 2016, 19:30 IST
‘ಟೈಟಾನಿಕ್‌’ ಲಾಕರ್‌ ಕೀಲಿಕೈ  ಹರಾಜು
‘ಟೈಟಾನಿಕ್‌’ ಲಾಕರ್‌ ಕೀಲಿಕೈ ಹರಾಜು   

ಲಂಡನ್‌: ದುರಂತ ಅಂತ್ಯ ಕಂಡ ಟೈಟಾನಿಕ್‌ ಹಡಗಿನಲ್ಲಿ ಜೀವರಕ್ಷಕ ಕವಚವಿದ್ದ ಲಾಕರ್‌ನ ಕೀಲಿಕೈ 85,000 ಪೌಂಡ್‌ಗೆ (₹69. 56 ಲಕ್ಷ) ಹರಾಜಾಗಿದೆ. ಇದುವರೆಗೆ ನಡೆದ ಟೈಟಾನಿಕ್‌ ಹಡಗಿನ ಸ್ಮರಣೀಯ ವಸ್ತುಗಳ ಹರಾಜಿನಲ್ಲಿ ಇದು ಬಹುದೊಡ್ಡ ಮೊತ್ತವಾಗಿದೆ.

ಕೀಲಿಕೈ ಜೊತೆಗೆ ಇತರ 200ರಷ್ಟು ಸ್ಮರಣೀಯ ವಸ್ತುಗಳು ಹರಾಜಾಗಿವೆ. 50,000 ಪೌಂಡ್‌ಗೆ (₹40.91ಲಕ್ಷ) ಕೀಲಿಕೈ ಹರಾಜಾಗಬಹುದು ಎಂದು ಮೊದಲು ನಿರೀಕ್ಷಿಸಲಾಗಿತ್ತು. ‘ಕೀಲಿಕೈ ದೊಡ್ಡ ಮೊತ್ತಕ್ಕೆ ಹರಾಜಾಗಿರುವುದು ಅದರ ಮಹತ್ವ ಮತ್ತು ಅಮೂಲ್ಯತೆಗೆ ಸಾಕ್ಷಿಯಾಗಿದೆ ಎಂದು’ ಹರಾಜುದಾರ ಆ್ಯಂಡ್ರ್ಯೂ ಅಲ್ಡ್ರಿಡ್ಜ್  ಹೇಳಿದ್ದಾರೆ.

ಈ ಕೀಲಿಕೈ 1912ರಲ್ಲಿ ಟೈಟಾನಿಕ್‌ ಹಡಗು ಮುಳುಗಡೆಯಾದಾಗ ಹಡಗಿನಲ್ಲಿ ಮೂರನೇ ದರ್ಜೆಯ  ಪರಿಚಾರಕನಾಗಿದ್ದ ಬರ್ಕ್‌ಶೆರ್‌ ನಿವಾಸಿ ಸಿಡ್ನಿ ಸೆಡುನರಿ ಅವರಿಗೆ ಸೇರಿದ್ದಾಗಿತ್ತು. ‘ಇತರರ ರಕ್ಷಣೆಗಾಗಿ  ಸಿಡ್ನಿ ಅವರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು  ಆ್ಯಂಡ್ರ್ಯೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.