ADVERTISEMENT

ಟ್ರಂಪ್‌ ಬಾಲ್ಯದ ಮನೆಯಲ್ಲಿ ನಿರಾಶ್ರಿತರ ವಾಸ

ಏಜೆನ್ಸೀಸ್
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಬಾಲ್ಯದಲ್ಲಿ ಟ್ರಂಪ್‌ ವಾಸವಾಗಿದ್ದ ಮನೆ
ಬಾಲ್ಯದಲ್ಲಿ ಟ್ರಂಪ್‌ ವಾಸವಾಗಿದ್ದ ಮನೆ   

ನ್ಯೂಯಾರ್ಕ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಬಾಲ್ಯ ಕಳೆದ ಮನೆಯಲ್ಲಿ ಈ ವಾರ ನಿರಾಶ್ರಿತರು ಆಶ್ರಯ ಪಡೆದರು. ನಿರಾಶ್ರಿತರ ಬಿಕ್ಕಟ್ಟನ್ನು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪ್ರಸ್ತಾಪಿಸಲು ಬಂದಿದ್ದವರು ಇಲ್ಲಿ ತಂಗಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಬಾಲ್ಯದಲ್ಲಿ ನಾಲ್ಕು ವರ್ಷ ಈ ಮನೆಯಲ್ಲಿ ತಂಗಿದ್ದರು.

ಇಂಗ್ಲೆಂಡ್‌ನ ಮಧ್ಯಪ್ರಾಚೀನ ಶೈಲಿಯಲ್ಲಿರುವ ಈ ಕಟ್ಟಡವು ಟ್ರಂಪ್‌ ತಂದೆ ಪ್ರೆಡ್‌ 1940ರಲ್ಲಿ ನಿರ್ಮಿಸಿದ್ದರು. ಈಗ ಎರ್‌ಬಿಎನ್‌ಬಿ ವೆಬ್‌ಸೈಟ್‌ನಲ್ಲಿ ಬಾಡಿಗೆಗೆ ಲಭ್ಯವಿದ್ದು, ದಿನವೊಂದಕ್ಕೆ ₹ 46,500 ಪಾವತಿಸಿ ಇಲ್ಲಿ ಉಳಿದುಕೊಳ್ಳಬಹುದು.  ಅಂತರರಾಷ್ಟ್ರೀಯ ಬಡತನ ವಿರೋಧಿ ಸಂಸ್ಥೆ ‘ಆಕ್ಸ್ ಫಾಮ್‌‘ ಶನಿವಾರ  ಇದನ್ನು  ಬಾಡಿಗೆಗೆ ಪಡೆದು, ಪತ್ರಕರ್ತರ ಜತೆ ಮಾತನಾಡಲು ನಾಲ್ಕು ಮಂದಿ ನಿರಾಶ್ರಿತರನ್ನು ಆಹ್ವಾನಿಸಿತ್ತು.

ಡೊನಾಲ್ಡ್‌ ಟ್ರಂಪ್‌ ನೇತೃತ್ವದ ರಿಪಬ್ಲಿಕನ್‌ ಸರ್ಕಾರವು ಆರು ಮುಸ್ಲಿಂ ರಾಷ್ಟ್ರ ಹಾಗೂ ನಿರಾಶ್ರಿತರನ್ನು  ದೇಶದ ಒಳಗೆ ಪ್ರವೇಶಿಸುವುದನ್ನು ನಿಷೇಧಿಸಿತ್ತು.

ADVERTISEMENT

‘ನಿರಾಶ್ರಿತರ ವಿಚಾರದಲ್ಲಿ ಟ್ರಂಪ್‌ ಹಾಗೂ ಜಾಗತಿಕ ನಾಯಕರಿಗೆ ಕಠಿಣ ಸಂದೇಶ ತಲುಪಿಸಲು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಂತಹವರಿಗೆ ಅವಕಾಶ ನೀಡುವಂತಾಗಬೇಕು’ ಎಂದು ಆಕ್ಸ್ ಫಾಮ್‌ ಅಮೆರಿಕದ ಮಾನವೀಯ ವಿಭಾಗದ ನಿರ್ದೇಶಕ ಶಾನ್ನೊನ್‌ ಸ್ಕ್ರಿಬ್ನರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.