ADVERTISEMENT

ಟ್ರಂಪ್‌ ವಿರುದ್ಧ ಮಹಿಳೆಯರ ಆಕ್ರೋಶ

ಏಜೆನ್ಸೀಸ್
Published 21 ಜನವರಿ 2017, 19:32 IST
Last Updated 21 ಜನವರಿ 2017, 19:32 IST
ಟ್ರಂಪ್‌ ವಿರುದ್ಧ ಮಹಿಳೆಯರ ಆಕ್ರೋಶ
ಟ್ರಂಪ್‌ ವಿರುದ್ಧ ಮಹಿಳೆಯರ ಆಕ್ರೋಶ   

ಲಂಡನ್: ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾರನೆಯ ದಿನವೇ, ಅವರ ವಿರುದ್ಧ ಅಮೆರಿಕ ಸೇರಿ ವಿಶ್ವದ ಹಲವೆಡೆ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.

ಮಹಿಳೆಯರ ಹಕ್ಕುಗಳನ್ನು ರಕ್ಷಿಸಬೇಕು ಎಂಬ ಸಂದೇಶವಿದ್ದ ಫಲಕ ಹಿಡಿದಿದ್ದ ಮಹಿಳೆಯರು, ಜಗತ್ತಿನ ಪ್ರಮುಖ ನಗರಗಳ ಬೀದಿಗಳಲ್ಲಿ ಕಾಲ್ನಡಿಗೆ ಪ್ರತಿಭಟನೆ ನಡೆಸಿದ್ದಾರೆ.

ಲಂಡನ್, ಮಕಾವ್, ಬರ್ಲಿನ್, ಸಿಡ್ನಿ, ಬ್ಯಾಂಕಾಕ್‌, ಮೆಲ್ಬರ್ನ್‌ಗಳಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಟ್ರಂಪ್‌ ಅವರನ್ನು ವಿರೋಧಿಸಿ ವಾಷಿಂಗ್ಟನ್‌ನಲ್ಲಿ ನಡೆದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಯುರೋಪಿನಲ್ಲಿ ಪ್ರತಿಭಟನೆ ನಡೆದಿದೆ. ವಾಷಿಂಗ್ಟನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ 5 ಲಕ್ಷ ಜನ ಪಾಲ್ಗೊಂಡಿದ್ದರು ಎನ್ನಲಾಗಿದೆ.

217 ಮಂದಿ ಬಂಧನ (ವಾಷಿಂಗ್ಟನ್‌ ವರದಿ) ಟ್ರಂಪ್‌ ವಿರುದ್ದ ಅಮೆರಿಕದ ವಿವಿಧೆಡೆ ಶುರುವಾಗಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದೆ.
ಅಮೆರಿಕದ ಹಲವೆಡೆ ನಡೆದ ಹಿಂಸಾಚಾರದಿಂದಾಗಿ ಹಲವು ಅಂಗಡಿಗಳು ಜಖಂಗೊಂಡಿವೆ. 217 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
*
ಡೊನಾಲ್ಡ್‌ ಟ್ರಂಪ್‌ಗೆ ಭಾರತದ ಆಹ್ವಾನ
ನವದೆಹಲಿ: ಆದಷ್ಟು ಶೀಘ್ರದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಅವರನ್ನು ಭಾರತ ಸರ್ಕಾರ ಆಹ್ವಾನಿಸಿದೆ. ಅಧಿಕಾರ ವಹಿಸಿಕೊಂಡ ನೂತನ ಅಧ್ಯಕ್ಷರನ್ನು ಅಭಿನಂದಿಸಿ, ರಾಷ್ಟ್ರಪತಿ ಪ್ರಣವ್  ಸಂದೇಶ ರವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.