ನ್ಯೂಯಾರ್ಕ್: ಪ್ರಸಿದ್ಧ ಚಿತ್ರಕಲಾವಿದ ಲಿಯನಾರ್ಡೊ ಡಾವಿಂಚಿ ಅವರು ರಚಿಸಿರುವ ‘ಸಾಲ್ವೇಟರ್ ಮುಂಡಿ’ (ಜಗದ ರಕ್ಷಕ) ಏಸು ಕ್ರಿಸ್ತನ ಕಲಾಕೃತಿಯು ಸುಮಾರು ₹658 ಕೋಟಿಗೆ ಹರಾಜಾಗುವ ನಿರೀಕ್ಷೆಯಿದೆ.
ಆಕಾಶ ನೀಲಿ ಬಣ್ಣದ ನಿಲುವಂಗಿ ತೊಟ್ಟಿರುವ ಏಸು ಕ್ರಿಸ್ತ ಎಡದ ಕೈಯಲ್ಲಿ ಸ್ಫಟಿಕದ ಗೋಲವನ್ನು ಹಿಡಿದಿರುವ ಹಾಗೂ ಬಲಗೈಯಲ್ಲಿ ಆಶೀರ್ವಾದ ಮುದ್ರೆ ತೋರಿರುವ ಈ ಕಲಾಕೃತಿಯು ಡಾವಿಂಚಿಯ ಜಗತ್ಪ್ರಸಿದ್ಧ ಕಲಾಕೃತಿಗಳಲ್ಲೊಂದಾಗಿದೆ.
1958ರಲ್ಲಿ ಈ ಕಲಾಕೃತಿಯು 45 ಪೌಂಡ್ಗೆ ಹರಾಜಾಗಿತ್ತು.
ನವೆಂಬರ್ 15ರಂದು ನ್ಯೂಯಾರ್ಕ್ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಇದರ ಮಾಲೀಕತ್ವ ಹೊಂದಿರುವ ಕ್ರಿಸ್ಟೀಸ್ ಸಂಸ್ಥೆ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.