ADVERTISEMENT

ಡೊಭಾಲ್‌–ಯಾಂಗ್ ಭೇಟಿ

ಪಿಟಿಐ
Published 27 ಜುಲೈ 2017, 19:30 IST
Last Updated 27 ಜುಲೈ 2017, 19:30 IST

ಬೀಜಿಂಗ್‌:  ಭಾರತ ಮತ್ತು ಚೀನಾ ನಡುವಿನ ಸಿಕ್ಕಿಂ ಗಡಿ ವಿವಾದ ಉಲ್ಬಣಿಸಿರುವುದರ ನಡುವೆಯೇ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮತ್ತು ಚೀನಾ ರಾಷ್ಟ್ರೀಯ ಭದ್ರತಾ ಸಲಹೆಗಾರ  ಯಾಂಗ್‌ ಜಿಯೆಚಿ ಗುರುವಾರ ಇಲ್ಲಿ ಮಾತುಕತೆ ನಡೆಸಿದರು.

ಗುರುವಾರ ಆರಂಭವಾದ ಎರಡು ದಿನಗಳ ‘ಬ್ರಿಕ್ಸ್‌’ ಸಮಾವೇಶದಲ್ಲಿ ಡೊಭಾಲ್‌ ಭಾಗವಹಿಸಿದ್ದಾರೆ.

ಇದೇ ವೇಳೆ ಯಾಂಗ್‌ ಅವರು ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ದೇಶಗಳ ಭದ್ರತಾ ಸಲಹೆಗಾರರ ಜತೆಗೂ ಚರ್ಚೆ ನಡೆಸಿದರು ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ದ್ವಿಪಕ್ಷೀಯ ಸಂಬಂಧ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಇಬ್ಬರೂ ಮಾತುಕತೆ ನಡೆಸಿದರು ಎಂದು ವರದಿಯಾಗಿದೆ. ಡೊಭಾಲ್‌ ಮತ್ತು ಯಾಂಗ್‌ ನಡುವಣ ಮಾತುಕತೆಯ ಬಗ್ಗೆ ಭಾರತದ ಮಾಧ್ಯಮಗಳು ಹೆಚ್ಚಿನ ವಿವರ ನೀಡಿಲ್ಲ.

ಸಿಕ್ಕಿಂ ವಿವಾದ ಪರಿಹಾರದ ನಿಟ್ಟಿನಲ್ಲಿ  ಡೊಭಾಲ್‌್ ಭೇಟಿ ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.