ADVERTISEMENT

ತ್ವರಿತ ಎಚ್‌–1ಬಿ ವೀಸಾ ಇಲ್ಲ

ಪಿಟಿಐ
Published 4 ಮಾರ್ಚ್ 2017, 20:23 IST
Last Updated 4 ಮಾರ್ಚ್ 2017, 20:23 IST
ತ್ವರಿತ ಎಚ್‌–1ಬಿ ವೀಸಾ ಇಲ್ಲ
ತ್ವರಿತ ಎಚ್‌–1ಬಿ ವೀಸಾ ಇಲ್ಲ   

ವಾಷಿಂಗ್ಟನ್: ಉದ್ಯೋಗಿಗಳಿಗೆ ಎಚ್‌–1ಬಿ ವೀಸಾ ಬಯಸುವ ಕಂಪೆನಿಗಳಿಗೆ ಕಹಿ ಸುದ್ದಿ ಇಲ್ಲಿದೆ. ಹೆಚ್ಚುವರಿ ಹಣ ಪಡೆದು ಎಚ್‌–1ಬಿ ವೀಸಾ ಅರ್ಜಿಯನ್ನು ತ್ವರಿತವಾಗಿ ಪರಿಶೀಲಿಸಿ, ವೀಸಾ ನೀಡುವ ಪ್ರಕ್ರಿಯೆಯನ್ನು ಏಪ್ರಿಲ್‌ 3ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಅಮೆರಿಕ ತೀರ್ಮಾನಿಸಿದೆ.

‘ಹೆಚ್ಚು ಹಣ ಪಾವತಿಸುವವರಿಗೆ ಎಚ್‌–1ಬಿ ವೀಸಾ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸುವ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ಇದರಿಂದಾಗಿ ಎಚ್‌–1ಬಿ ವೀಸಾ ಅರ್ಜಿಗಳ ಪರಿಶೀಲನೆಗೆ ಬೇಕಿರುವ ಒಟ್ಟು ಸಮಯದಲ್ಲಿ ಉಳಿತಾಯ ಆಗಲಿದೆ’ ಎಂದು ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ ಹೇಳಿದೆ. 

ತಾತ್ಕಾಲಿಕ ಸ್ಥಗಿತವು ಆರು ತಿಂಗಳವರೆಗೆ ಜಾರಿಯಲ್ಲಿರುವ ಸಾಧ್ಯತೆ ಇದೆ.

ಸ್ಥಗಿತಗೊಂಡಿರುವ  ವ್ಯವಸ್ಥೆ ಹೀಗಿತ್ತು...
ಎಚ್‌–1ಬಿ ವೀಸಾ ಅರ್ಜಿ ಕುರಿತು ತೀರ್ಮಾನ ತೆಗೆದುಕೊಳ್ಳಲು ಅಮೆರಿಕದ ಅಧಿಕಾರಿಗಳಿಗೆ 3ರಿಂದ 6 ತಿಂಗಳು  ಬೇಕಾಗುತ್ತದೆ.
ಆದರೆ, ಕುಶಲ ತಂತ್ರಜ್ಞರ ಅಗತ್ಯ ಇರುವ ಕಂಪೆನಿಗಳು ಹೆಚ್ಚುವರಿಯಾಗಿ  ₹ 81,752 ಪಾವತಿಸಿ, ತಮಗೆ ಅಗತ್ಯವಿರುವ ತಂತ್ರಜ್ಞನ ಅರ್ಜಿಯನ್ನು ತ್ವರಿತವಾಗಿ ಪರಿಶೀಲಿಸಲು ಕೋರುತ್ತವೆ.

ಇಂತಹ ಅರ್ಜಿಗಳನ್ನು ಸಾಮಾನ್ಯವಾಗಿ 15 ದಿನಗಳಲ್ಲಿ ಪರಿಶೀಲಿಸಿ, ವೀಸಾ ನೀಡಲಾಗುತ್ತದೆ. ಈ ವ್ಯವಸ್ಥೆ  ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.