ADVERTISEMENT

ದನದ ಕೊಬ್ಬಿನ ನೋಟು: ಕ್ರಮಕ್ಕೆ ಭರವಸೆ

ಪಿಟಿಐ
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST
ದನದ ಕೊಬ್ಬಿನ ನೋಟು: ಕ್ರಮಕ್ಕೆ ಭರವಸೆ
ದನದ ಕೊಬ್ಬಿನ ನೋಟು: ಕ್ರಮಕ್ಕೆ ಭರವಸೆ   

ಲಂಡನ್: ಹಸುಗಳ ಕೊಬ್ಬನ್ನು ಬಳಸಿ ತಯಾರಿಸಿದ ಐದು ಪೌಂಡ್‌ನ ಹೊಸ ನೋಟುಗಳ ಕುರಿತು ಉಂಟಾಗಿರುವ ಕಳವಳವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ಬ್ಯಾಂಕ್ ಆಫ್ ಇಂಗ್ಲೆಂಡ್, ಸೂಕ್ತ ಸಲಹೆಗಳನ್ನು ಪಡೆದ ಬಳಿಕವೇ 20 ಪೌಂಡ್‌ನ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದೆ.

ಹಿಂದೂಗಳು ಗೋವನ್ನು ಪವಿತ್ರವೆಂದು ಪರಿಗಣಿಸಿದ್ದಾರೆ. ದನದ ಕೊಬ್ಬಿನಿಂದ ಮಾಡಿರುವ ನೋಟುಗಳನ್ನು ಬಳಸುವುದು ತಮ್ಮ ನಂಬಿಕೆಗಳಿಗೆ ವಿರುದ್ಧವಾಗಿದೆ. ಹೀಗಾಗಿ ಈಗ ಚಾಲ್ತಿಯಲ್ಲಿರುವ ನೋಟುಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಬ್ರಿಟನ್‌ನ ಹಿಂದೂ ಸಮಿತಿ ಅಲ್ಲಿನ ಕೇಂದ್ರ ಬ್ಯಾಂಕ್‌ಗೆ ಮನವಿ ಮಾಡಿತ್ತು.

ವಿವಿಧೆಡೆಗಳಿಂದ ಸಲಹೆಗಳನ್ನು ಪಡೆದುಕೊಂಡ ಬಳಿಕವೇ 20 ಪೌಂಡ್‌ನ ಹೊಸ ನೋಟುಗಳನ್ನು ಚಲಾವಣೆಗೆ ತರುವುದಾಗಿ ಬ್ಯಾಂಕ್‌ ಭರವಸೆ ನೀಡಿರುವುದಾಗಿ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.